‘ನಾನೊಬ್ಬ ಐಪಿಎಸ್ ಅಧಿಕಾರಿ ಬೆಂಗಳೂರು ಸಿಸಿಬಿ ಕಚೇರಿಯಲ್ಲಿ ಎಸಿಪಿ ಆಗಿ ಕೆಲಸ ಮಾಡುತ್ತಿದ್ದೇನೆ’ ಎಂಬುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ವಿಶುಕುಮಾರ್ ಅಲಿಯಾಸ್ ಅರ್ಜುನ್ ನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
‘ಮಂಡ್ಯದ ಅರ್ಜುನ್, ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ. ಕೆಲ ವರ್ಷಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಗಿರಿನಗರದಲ್ಲಿ ನೆಲೆಸಿದ್ದ. ಈತನ ಕೃತ್ಯದ ವಿರುದ್ಧ ಮಲ್ಲೇಶ್ವರ ನಿವಾಸಿ ಎಸ್. ರಾಘವೇಂದ್ರ ಜೂನ್ 9ರಂದು ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ದೂರುದಾರ ರಾಘವೇಂದ್ರ, ಫೈನಾನ್ಸ್ ಕಂಪನಿ ನಡೆಸುತ್ತಿದ್ದಾರೆ. 2022ರಲ್ಲಿ ಪರಿಚಯಸ್ಥರ ಮೂಲಕ ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ಅರ್ಜುನ್, ‘ನಾನೊಬ್ಬ ಐಪಿಎಸ್ ಅಧಿಕಾರಿ. ಸದ್ಯ ಸಿಸಿಬಿ ಎಸಿಪಿ ಆಗಿದ್ದೇನೆ’ ಎಂದಿದ್ದ. ಪೊಲೀಸರಿಗೆ ಸಂಬಂಧಪಟ್ಟ ಫೋಟೊಗಳನ್ನು ದೂರುದಾರರಿಗೆ ಆಗಾಗ ಕಳುಹಿಸುತ್ತಿದ್ದ. ಫೋಟೊ ನೋಡಿದ್ದ ದೂರುದಾರ, ಆರೋಪಿಯ ಮಾತು ನಂಬಿದ್ದರು.
‘ಮದುವೆಯಾಗುತ್ತಿರುವುದಾಗಿ ಹೇಳಿದ್ದ ಆರೋಪಿ, 125 ಲಕ್ಷ ಸಾಲ ಕೇಳಿದ್ದ. ಮೂರು ತಿಂಗಳು ಬಿಟ್ಟು ಬಡ್ಡಿ ಸಮೇತ ಹಣ ವಾಪಸು ನೀಡುವುದಾಗಿ ತಿಳಿಸಿದ್ದ. ಅದನ್ನು ನಂಬಿದ್ದ ದೂರುದಾರ, ಸ್ನೇಹಿತರ ಬಳಿ 7 20 ಲಕ್ಷ ಸಾಲ ಪಡೆದು ಆರೋಪಿ ಖಾತೆಗೆ ವರ್ಗಾವಣೆ ಮಾಡಿದ್ದರು. ಉಳಿದ 75 ಲಕ್ಷವನ್ನು ಕಾಟನ್ ಪೇಟೆಯ ಸಿಸಿಬಿ ಕಚೇರಿ ಬಳಿಯೇ ಆರೋಪಿ ಕೈಗೆ ಕೊಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ಆರೋಪಿಯ ಮದುವೆಗೂ ದೂರುದಾರ ಹೋಗಿ ಬಂದಿದ್ದರು. ನಿಗದಿತ ಸಮಯಕ್ಕೆ ಸಾಲ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ‘ಕೊಲೆ ಪ್ರಕರಣದ ಆರೋಪಿಗಳು ನನಗೆ ಪರಿಚಯ. ಅವರಿಗೆ ಹೇಳಿ ನಿನ್ನನ್ನು ಕೊಲೆ ಮಾಡಿಸುತ್ತೇನೆ’ ಎಂದು ದೂರುದಾರರಿಗೆ ಬೆದರಿಕೆಯೊಡ್ಡಿದ್ದ. ಇದರಿಂದ ನೊಂದ ದೂರುದಾರ, ಸ್ನೇಹಿತರ ಬಳಿ ಅಳಲು ತೋಡಿಕೊಂಡಿದ್ದರು.ಆರೋಪಿ ಬಗ್ಗೆ ಸ್ನೇಹಿತರು ಮಾಹಿತಿ ಕಲೆಹಾಕಿದಾಗ, ಆತನೊಬ್ಬನಕಲಿ ಅಧಿಕಾರಿ ಎಂಬುದು ತಿಳಿದಿತ್ತು’ ಎಂದು ಮೂಲಗಳು ಹೇಳಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


