ತುಮಕೂರು: ರೈಲ್ವೆ ಹಳಿ ಬಳಿ ಭೂ ಕುಸಿತವಾದ ಹಿನ್ನೆಲೆಯಲ್ಲಿ ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿರೋ ಘಟನೆ ಸೋಮವಾರ ತಿಪಟೂರು ನಗರದ ಗಾಂಧಿ ನಗರದ ಬಳಿ ನಡೆದಿದೆ.
ತಿಪಟೂರಿನ ಗಾಂಧಿನಗರದ ಅಂಡರ್ ಪಾಸ್ ಬಳಿ ಲಘು ಭೂಕುಸಿತ ಉಂಟಾಗಿತ್ತು. ಅಂಡರ್ ಪಾಸ್ ನಲ್ಲಿ ತುಂಬಿದ ಮಳೆ ನೀರಿನಿಂದಾಗಿ ಭೂಕುಸಿತವಾಗಿದೆ.
ಜೆಸಿಬಿಯಿಂದ ಕಾರ್ಯಾಚರಣೆ ಮಾಡುತ್ತಿರುವ ರೇಲ್ವೆ ಇಲಾಖೆಯು ಅದನ್ನು ತೆರವುಗೊಳಿಸಲು ಮುಂದಾಗಿದೆ. ನಿಜಾಮುದ್ದಿನ್ ಎಕ್ಸ್ ಪ್ರೆಸ್ ಸೇರಿದಂತೆ ಬೆಂಗಳೂರು ಕಡೆಗೆ ಹೋಗುವ ಅನೇಕ ರೈಲು ಗಳ ಸಂಚಾರ ದಲ್ಲಿ ವ್ಯತ್ಯಯವಾಗಿದೆ. ಕೆಲವು ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದೆ.
ಸುಮಾರು ಹತ್ತು ಅಡಿಗೂ ಹೆಚ್ಚು ಭೂಕುಸಿತವಾಗಿದ್ದು ನೀರು ಸಂಗ್ರಹವಾಗಿದೆ. ಅಲ್ಲದೆ ಯಾವ ವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಾಣ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


