ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇಲೆ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ. 420 ಅಡಿ ಕೇಸ್ ದಾಖಲಾಗಿದೆ. ಉದ್ಯಮಿ ದೇವನಾತ್ ವೈಕ್ಯ ಎಂಬುವವರು ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು ನೀಡಿದ್ದು, ಈ ದೂರನ್ನು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ.
2017ರ ಜುಲೈನಲ್ಲಿ ದೇವನಾತ್ ವೈಕೈ ಅವರು ಸಂಬರಗಿಯಿಂದ ಸಾಲ ಪಡೆದಿದ್ದರು. ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೊಟ್ಟು ಶೂರಿಟಿ ನೀಡಿದ್ದರು. ಬಳಿಕ 2017ರ ಡಿಸೆಂಬರ್ ನಲ್ಲಿ ಪ್ರಶಾಂತ್ ಗೆ ದೇವನಾಥ್ ಹಣ ವಾಪಸ್ ನೀಡಿದ್ದರು.
ಆದರೆ ದೇವನಾಥ್ ವೈಕೈ ಬಳಿ ಹೆಚ್ಚಿನ ಬಡ್ಡಿ, ಹಣ ನೀಡಬೇಕೆಂದು ಮನೆ ದಾಖಲೆ ನೀಡದೆ ಪ್ರಶಾಂತ್ ಸಂಬರ್ಗಿ ಸತಾಯಿಸಿದ್ದರು. ಜೊತೆಗೆ ವಿವಿಧ ಠಾಣೆಯಲ್ಲಿ ದೇವನಾತ್ ವೈಕೈ ವಿರುದ್ಧ ಸುಳ್ಳು ದೂರು ನೀಡಿದ್ದರು. ಸುಳ್ಳು ದೂರು ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


