ಬೆಂಗಳೂರು: ನಗರ ಪಶ್ಚಿಮ ವಿಭಾಗದ ಪೊಲೀಸರು 4 ಮೊಬೈಲ್ ಫೋನ್‌ಗಳು ಮತ್ತು ನಗದು ಹಣ ಸುಲಿಗೆ ಮಾಡಿದ ಮೂರು ಜನ ಆರೋಪಿತರ ಬಂಧಿಸಿದ್ದಾರೆ.
ಕಳೆದ ದಿನಾಂಕ 10 ರಂದು ರಾತ್ರಿ ಸುಮಾರು 11-50 ಗಂಟೆಯ ಸಮಯದಲ್ಲಿ ಆರ್‌ಐ ಕಾಲೇಜ್‌ನ ವಿದ್ಯಾರ್ಥಿಗಳಾದ ಮನ್ವಿತ್ ರಾವ್ 19 ವರ್ಷ, ಜೋಸ್ಟಾ 18 ವರ್ಷ, ದೃಷ್ಟಿ 19 ವರ್ಷ, ಆರೈತ 18 ವರ್ಷ, ರಿಯಾ 18 ವರ್ಷ, ಎಂಬುವರುಗಳು ಸೇರಿಕೊಂಡು ಟ್ರಕ್ಕಿಂಗ್ ಮಾಡಿದ್ದರು.
ಸೂರ್ಯೋದಯವನ್ನು ನೋಡುವ ಉದ್ದೇಶದಿಂದ ಪಿಇಎಸ್ ಕಾಲೇಜ್ ಹತ್ತಿರದಲ್ಲಿರುವ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗುವ ಸಲುವಾಗಿ ತಮ್ಮ ಮೊಬೈಲ್‌ನಲ್ಲಿ ಕಾಲ ಕ್ಯಾರ್ ಮಿಕ್ ಮಾಡಿಕೊಂಡು ಬಂದಿದ್ದು, ಈ ಸಮಯದಲ್ಲಿ ತಾವು ಹೋಗಬೇಕಾಗಿದ್ದ ಲೋಕೇಷನ್ ಅನ್ನು ತಪ್ಪಾಗಿ ನರದಾಗಿದ್ದರಿಂದ ಮೇಲ್ಕಂಡ 5 ಜನ ವಿದ್ಯಾರ್ಥಿಗಳು ತಡರಾತ್ರಿ 12-30 ಗಂಟೆಯ ಸಮಯದಲ್ಲಿ ಅಂದಹಳ್ಳಿ ಮುಖ್ಯರಸ್ತೆಯ ವೆಂಕಟೇಶ್ವರ ಬಡಾವಣೆಯಲ್ಲಿರುವ ಫಾರ್ಮಸಿ ಬಳಿ ಬಂದು ವಿಳಾಸ ಪರಿಶೀಲಿಸಿದಾಗ ಯಾರೋ 3 ಜನ ಅಪರಿಚಿತ ವ್ಯಕ್ತಿಗಳು ಒಂದು ಹೊಂಡಾ ಆಕ್ಟಿವಾ ದಿವಾ ವಾಹನದಲ್ಲಿ ತಮ್ಮ ಕೈಯಲ್ಲಿ ಕಾಣದ ಲಾಂಗ್, ತಲ್ವಾರ್ ಮತ್ತು ಡ್ರಾಗರ್‌ಗಳನ್ನು ಹಿಡಿದುಕೊಂಡು ಮೇಲ್ಕಂಡ ರ ಜನ ವಿದ್ಯಾರ್ಥಿಗಳನ್ನು ಬೆದರಿಸಿ ಅವರ ೨೮ ಇದ್ದ ವಿವಿಧ ಕಂಪನಿಯ 4 ಮೊಬೈಲ್ ಫೋನ್‌ಗಳು, 3000/- ರೂ. ನಗದು ಹಣವನ್ನು ಸುಲಿಗೆ ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿರುತ್ತದೆ.
ಈ ಸಮಯ ಮಾಹಿತಿಯನ್ನು ಪಡೆದುಕೊಂಡ ಹೊಯ್ಸಳ ಪೊಲೀಸರು ಸರಹದ್ದಿನಲ್ಲಿ ಹೊಯ್ಸಳ ವಾಹನ ಮತ್ತು ಹಬ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದಪ್ಪ ಎಎಸ್‌ಐ, ರೇಣುಕುಮಾರ್ ಹೆಚ್-9679 ಕಾಡೇಗೌಡ ಎಹೆಚ್‌ಸಿ 19031 ಹಾಗೂ ಕಸ್ತೂರಿ, ಪಿಸಿ-15093 ರವರುಗಳು ಸ್ಥಳಕ್ಕೆ ತರ# 5 ಜನ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಿದ್ದ ಆಸಾಮಿಗಳ ಬಗ್ಗೆ ಲಭ್ಯವಿದ್ದ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡು ಕೃತ್ಯ ನಡೆದ ಸುಮಾರು 2 ಗಂಟೆಯ ಒಳಗೆ ಸುಲಿಗೆ ಮಾಡಿದ್ದ 3 ಜನ ಆಸಾಮಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


