9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಜೈನ್ ಹೆರಿಟೇಜ್ ಶಾಲೆ -ಬೆಳಗಾವಿ ಸಹಯೋಗದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯ -ಜಿಲ್ಲಾ ಆಯುಷ್ ಆಸ್ಪತ್ರೆ ಟಿಳಕವಾಡಿ ಮಂಡೋಳಿ ರೋಡ್ -ಬೆಳಗಾವಿಯಲ್ಲಿ ದಿನಾಂಕ 17 -06 -2023 ರಂದು ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಯೋಗ ತರಬೇತಿಯ ತರಗತಿಯನ್ನು ಆಯೋಜಿಸಲಾಯಿತು.
ಯೋಗ ಶಿಕ್ಷಕರಾದ ಲಟುಕರ, ವಿದ್ಯಾರ್ಥಿ ಸತ್ಯಂ ಖಾಂಡೇಕರ್, ಹಾಗೂ ಯೋಗ ಶಿಕ್ಷಕಿಯಾದ ಪಲ್ಲವಿ ನಾಡಕರ್ಣಿ ಮುಂದಾಳತ್ವದಲ್ಲಿ ಜೈನ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು. ಶಿಕ್ಷಕರು ಭಾಗವಹಿಸಿ ಯೋಗದ ಪ್ರಾಮುಖ್ಯತೆಯನ್ನ ತಿಳಿದುಕೊಳ್ಳುವುದಲ್ಲದೆ ಆರೋಗ್ಯಕ್ಕೆ ಯೋಗವು ಉತ್ತಮವಾದದ್ದು ಎಂದು ಅರಿತುಕೊಂಡರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ್ ಸುಣದೊಳಿ ಹಾಗೂ ಡಾ. ಗಿರೀಶ್ ಪಶುಪತಿಮಠ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


