ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ಧರ್ಮಗುರು ಪೀಟರ್ ಮಚಾಡೋ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಗುರುವನ್ನು ಭೇಟಿ ಮಾಡಿದರು.
ಮಿಲ್ಲರ್ಸ್ ರಸ್ತೆಯಲ್ಲಿರೋ ಬಿಷಪ್ ನಿವಾಸಕ್ಕೆ ಭೇಟಿ ನೀಡಿದ ಸಿಎಂಗೆ ಹೂಗುಚ್ಛ ನೀಡಿದ ಧರ್ಮಗುರು ಡಾ. ಪೀಟರ್ ಮಚಾಡೋ ಬರಮಾಡಿಕೊಂಡರು.
ಸಿಎಂ ಭೇಟಿ ಬಗ್ಗೆ ಜಾರ್ಜ್ ಸ್ಪಷ್ಟನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕ್ರಿಶ್ಚಿಯನ್ ಬಿಷಪ್ ಅನ್ನು ಭೇಟಿಯಾಗಿ ಆಶೀರ್ವಾದ ತಗೊಂಡಿದ್ದಾರೆ ಎಂದು ಸಚಿವ ಕೆಜೆ ಜಾರ್ಜ್ ಬೆಂಗಳೂರಿನಲ್ಲಿ ಮಾತನಾಡಿ, ಇದು ಸೌಹರ್ದಯುತ ಭೇಟಿ ಎಂದು ತಿಳಿಸಿದರು.
ಸುತ್ತೂರು ಶ್ರೀ ಸೇರಿದಂತೆ ಎಲ್ಲಾ ಧರ್ಮದ ಗುರುಗಳನ್ನು ಭೇಟಿಯಾಗಿದ್ದಾರೆ. ಅದೇ ರೀತಿ ಇಂದು ಮುಸ್ಲಿಂ ಧರ್ಮಗುರುಗಳು ಮತ್ತು ಕ್ರಿಶ್ಚಿಯನ್ ಧರ್ಮಗುರುಗಳನ್ನು ಭೇಟಿಯಾಗಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಿಎಂಗೆ ಸಚಿವ ಕೆಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಸ್ಥಳೀಯ ಮುಖಂಡರ ಸಾಥ್ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


