ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಹರಿಹಾಯ್ದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕುಮಾರ್ ಟಾಕಳೆ ಒಬ್ಬ ಹೆಣ್ಣುಬಾಕ, ಸೆಕ್ಸ್ ಟ್ರೇಡರ್ ಇದ್ದಾನೆ. ನನ್ನ ಖಾಸಗಿ ವೀಡಿಯೋಗಳನ್ನು ವೆಬ್‍ಸೈಟ್ ಗೆ ಮಾರಾಟ ಮಾಡಿದ್ದಾನೆ. ಪೊಲೀಸರ ತನಿಖೆಯಲ್ಲಿ ಮೊಬೈಲ್ ಕಳೆದು ಹೋಗಿದೆ ಅಂತಾ ಏಕೆ ಸುಳ್ಳು ಹೇಳುತ್ತಿದ್ದಾನೆ. ಆತನ ಮೊಬೈಲ್ ನಲ್ಲಿ ಬೇರೆ ಹೆಣ್ಣುಮಕ್ಕಳ ವಿಡಿಯೋಗಳು ಸಹ ಇರಬಹದು ಎಂದು ಆರೋಪಿಸಿದರು.
ಟಾಕಳೆ ಮನೆಯೇ ಅಕ್ರಮ ಚಟುವಟಿಕೆ ನಡೆಸುವ ತಾಣವಾಗಿದೆ. ಆತನ ಪತ್ನಿ ಹೇಗೆ ನನಗೆ ಮನೆಯಲ್ಲಿ ಒಂದು ವಾರ ಇರಲು ಅವಕಾಶ ಕೊಟ್ಟಳು? ಇದು ಬಿಗ್ ಮಾಫಿಯಾ ಇದೆ. ಒಬ್ಬ ನವ್ಯಶ್ರೀ ಸತ್ಯಾಸತ್ಯತೆ ಬಯಲಿಗೆಳೆದಿರಬಹುದು. ಸರ್ಕಾರಿ ಅಧಿಕಾರಿಯಾಗಿ ಸರ್ಕಾರಿ ಬಂಗಲೆ ದುರುಪಯೋಗ ಪಡಿಸಿಕೊಂಡಿದ್ದಾನೆ. ಈತನ ಕಾಮಕೃತ್ಯಕ್ಕೆ ಎಷ್ಟೋ ಹೆಣ್ಣು ಮಕ್ಕಳು ಬಲಿಯಾಗಿರಬಹುದು ಎಂದು ಪ್ರಶ್ನಿಸಿದ್ದಾರೆ. ಇಂತಹ ಗೋಮುಖ ವ್ಯಾಘ್ರನ ಜೊತೆ ಆತನ ಸಹೋದರರು ಸೇರಿದ್ದಾರೆ. ಯಾವ್ಯಾವ ವೆಬ್‍ಸೈಟ್ ಗೆ ಯಾವ್ಯಾವ ಹೆಣ್ಣುಮಕ್ಕಳ ಖಾಸಗಿ ವಿಡಿಯೋ ಮಾರಾಟ ಮಾಡಿದ್ದಾನೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


