ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆ ಪುರಸಭೆ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ಯರಳ್ಳಿ 18, 20ನೆ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಹಲವಾರು ವರ್ಷಗಳಿಂದ ಪುರಸಭೆಗೆ ಮನವಿಯನ್ನ ನೀಡಿದ್ದೇವೆ. ಈ ಸಂಬಂಧ ಈ ಭಾಗದ ಪುರಸಭಾ ಸದಸ್ಯರುಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ವಹಿಸದೆ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ ಎಂದು ಪುರಸಭೆ ಕಚೇರಿ ಮುಂದೆ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ಹೆಚ್.ಡಿ.ಕೋಟೆ ಬಸ್ ನಿಲ್ದಾಣದಿಂದ ಪುರಸಭಾ ಕಚೇರಿವರೆಗೆ ಮಹಿಳೆಯರು ಬಿಂದಿಗೆ ಹೊತ್ತು ಆಗಮಿಸಿ ಸದಸ್ಯರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಪುರಸಭೆ ಕಚೇರಿ ತಲುಪಿ ಪುರಸಭಾ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಬಳಿಕ ಪ್ರತಿಭಟನಾಕಾರರನ್ನು ಕುರಿತು ಆರ್ ಪಿ ಐ ಜಿಲ್ಲಾ ಅಧ್ಯಕ್ಷೆ ಅನುಷಾ ಮಾತನಾಡಿ, ಹ್ಯಾಂಡ್ ಪೋಸ್ಟ್ ಯರಳ್ಳಿ 18, 20 ನೆ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪುರಸಭೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನಾಗುತ್ತಿಲ್ಲ. ನೀರಿನ ಸಮಸ್ಯೆ ಅಲ್ಲದೆ ಇನ್ನು ಹಲವು ಮೂಲಭೂತ ಸೌಕರ್ಯಗಳು ಒದಗಿಸುವುದರಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ನೀರಿನ ಸೌಲಭ್ಯ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡದೆ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಇದೇ ವೇಳೆ ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದರು.
ಪುರಸಭಾ ಮುಖ್ಯ ಅಧಿಕಾರಿ ಸುರೇಶ್ ಅವರಿಗೆ ಇದೇ ವೇಳೆ ಪ್ರತಿಭಟನಾಕಾರರು ಮನವಿ ನೀಡಿದರು, ಪುರಸಭಾ ಮುಖ್ಯ ಅಧಿಕಾರಿ ಸುರೇಶ್ ಮನವಿ ಸ್ವೀಕರಿಸಿದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
admin


