ತಿಪಟೂರು: ಶ್ರೀ ಆದಿಚುಂಚನಗಿರಿ ಶಾಖಾಮಠ ಪುಣ್ಯಕ್ಷೇತ್ರ ಶ್ರೀ ಚೌಡೇಶ್ವರಿ ದೇವಸ್ಥಾನ ದಸರೀಘಟ್ಟದಲ್ಲಿ ಆಶಾಡ ಮಾಸದ ಮೊದಲನೇ ಮಂಗಳವಾರದಂದು ಶಾಖಾಮಠದ ಪೂಜ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಹಾಗೂ ಚೌಡೇಶ್ವರಿ ಅಮ್ಮನವರಿಗೆ ಮತ್ತು ಕರಿಯಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಎಲೆರಾಂಪುರ ಮಠದ ಪೂಜ್ಯ ಶ್ರೀ ಶ್ರೀ ಶ್ರೀ ಡಾ .ಹನುಮಂತನಾಥ ಮಹಾ ಸ್ವಾಮೀಜಿಯವರು ಹಾಗೂ ಈ ಶ್ರೀ ಆದಿಚುಂಚನಗಿರಿ ಅಮೇರಿಕಾ ಶಾಖಾಮಠದ ಶ್ರೀ ಶ್ರೀಶೈಲ ಸ್ವಾಮೀಜಿಯವರು ಹಾಗೂ ಯಲಹಂಕ ಮಠದ ಶ್ರೀ ಡಾ .ಅರುಣ್ ಗುರೂಜಿಯವರು ಕುಣಿಗಲ್ ಮಠದ ಶ್ರೀ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿಯವರು ಹಾಗೂ ಹಾಸನದ ಉದ್ಯಮಿಯಾದ ವಿಜಯ್ ಕುಮಾರ್ ಅವರು ಹಾಗೂ ಗ್ರಾಮಸ್ಥರು ಸಹಸ್ರಾರು ಭಕ್ತರು ಉಪಸ್ಥಿತರಿದ್ದರು ಪೂಜಾ ಕಾರ್ಯವನ್ನು ಬಾಲಕೃಷ್ಣ ಭಟ್ ರವರು ನೆರವೇರಿಸಿದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


