ಶಾಲಾ ವಿದ್ಯಾರ್ಥಿಗಳ ಬೆನ್ನಿನ ಭಾರ ಇಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಮಹತ್ವದ ಆದೇಶವನ್ನು ಹೊರಡಿಸಿದೆ.
ಅದರ ಪ್ರಕಾರ 1 ಮತ್ತು 2 ನೇ ತರಗತಿ ಮಕ್ಕಳು 1. 5 ರಿಂದ 2 ಕೆಜಿ ತೂಕದವರೆಗೆ ಪುಸ್ತಕ ತೆಗೆದುಕೊಂಡು ಹೋಗಬಹುದು. ಅದೇ ರೀತಿ 3-5 ನೇ ತರಗತಿಯ ವಿದ್ಯಾರ್ಥಿಗಳು 2 ರಿಂದ 3 ಕೆಜಿ, 6 ರಿಂದ 8 ನೇ ತರಗತಿ ಮಕ್ಕಳು 3 ರಿಂದ 4 ಕೆಜಿ, 9-10 ನೇ ತರಗತಿ 4 ರಿಂದ 5 ಕೆಜಿಯಷ್ಟು ತೂಕವಿರುವ ಪುಸ್ತಕದ ಬ್ಯಾಗ್ ಅನ್ನು ತೆಗೆದುಕೊಂಡು ಹೋಗಲಷ್ಟೇ ಅನುಮತಿ ನೀಡಲಾಗಿದೆ.
ಈ ಮೊದಲು ಸರಿಯಾದ ಟೈಮ್ ಟೇಬಲ್ ಪಾಲಿಸದೇ ಬೆನ್ನುಮುರಿಯುವಂತೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಶಿಕ್ಷಣ ಸಂಸ್ಥೆಗಳು ಹೊರಿಸುತ್ತಿದ್ದವು ಎಂಬ ಆರೋಪವಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


