ಬೆಳಗಾವಿ: ಇಂದು ವಾಣಿಜ್ಯ ಉದ್ಯಮಿ ಕೈಗಾರಿಕಾ ಸಂಸ್ಥೆಗಳಿಂದ ಬೆಳಗಾವಿ ಕೈಗಾರಿಕಾ ಉದ್ಯಮ 30,000 ಕ್ಕಿಂತ ಹೆಚ್ಚು ನೋಂದಾಯಿತ ಕೈಗಾರಿಕೆಗಳು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಗಳು ಬಂದ್ ಮಾಡಿ, ನಗರದ ಬೋಗಾರ್ ವೆಸ್ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡು, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ವಿದ್ಯುತ್ ದರ ವಾಪಸ್ ಪಡೆಯಬೇಕೆಂದು ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೆ ಇ ಆರ್ ಸಿ ನಿರ್ಣಯ ಧನ್ವಯ ಶೇ. 30 ರಿಂದ 60 ರಷ್ಟು ವಿದ್ಯುತ್ ದರ ಏರಿಕೆಯಾಗಿದೆ, ಆದ್ದರಿಂದ ಸಣ್ಣ ಮತ್ತು ಮಾಧ್ಯಮ ಕೈಗಾರಿಕಗಳು ಸಂಕಟಕ್ಕೆ ಸಿಲುಕಿವೆ. ಹೀಗಾಗಿ ವಿದ್ಯುತ್ ಶುಲ್ಕ ಇಳಿಕೆ ಮಾಡುವಂತೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘಟನೆ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅನೇಕ ಸಂಘಟನೆಗಳು, ಕೈಗಾರಿಕಾ ಉದ್ಯಮಗಳ ಒಕ್ಕೂಟಗಳು, ಬೃಹತ್ ಪ್ರತಿಭಟನೆ ಭಾಗವಹಿಸಿ ಸಂಘಟನೆಗಳು ಎಲೆಕ್ಟ್ರಿಕಲ್ ಬೈಕ್ ಶವ ಶವಸಂಸ್ಕಾರ ರೂಪಕವಾಗಿ ಪ್ರತಿಭಟನೆಯಲ್ಲಿ ತರಲಾಗಿತ್ತು .
ವಿದ್ಯುತ್ ದರ ಇಳಿಲೇ ಬೇಕು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ವಿರೋಧಿಸಿದರು.
ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕಾಗಳು ಬಂದ್ ಮಾಡಿ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


