ಮೆಜೆಸ್ಟಿಕ್ ನಲ್ಲಿ ಪರಿಚಯ ವಾಗಿದ್ದ ಮಹಿಳೆ, ಸಿನಿಮಾ ನೋಡಲು ಕರೆದೊಯ್ದು – 3 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾಳೆ’ ಎಂದು ಆರೋಪಿಸಿ ನಟರಾಜ್ (70) ಅವರು ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಕಂಪನಿಯೊಂದರ ನಿವೃತ್ತ ಉದ್ಯೋಗಿ ನಟರಾಜ್ ದೂರು ನೀಡಿದ್ದಾರೆ. ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೂರಿನ ವಿವರ: ‘ಜೂನ್ 12ರ ಮಧ್ಯಾಹ್ನ ಮೆಜೆಸ್ಟಿಕ್ ಬಳಿ ಹೋಗಿದ್ದೆ. ಅಲ್ಲಿಯೇ ಮಹಿಳೆಯೊಬ್ಬರ ಪರಿಚಯ ವಾಗಿತ್ತು. ನನ್ನ ಜೊತೆ ಸಲುಗೆಯಿಂದ ಮಾತನಾಡಿದ್ದಳು. ಹಣ ಕೊಟ್ಟರೆ ನನ್ನೊಂದಿಗೆ ಬರುವುದಾಗಿ ಹೇಳಿದ್ದಳು’ ಎಂದು ವೃದ್ಧ ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರೂ ಸಿನಿಮಾ ನೋಡಲು ಮಂತ್ರಿ ಮಾಲ್‌ಗೆ ಹೋಗಿದ್ದೆವು. ನನ್ನ ಮೈ ಮೇಲೆ ಚಿನ್ನಾಭರಣವಿತ್ತು. ಮತ್ತು ಬರುವ ಔಷಧಿ ಬೆರೆಸಿದ್ದ ಪಾನೀಯವನ್ನು ಮಹಿಳೆ ನನಗೆ ಕುಡಿಸಿದ್ದಳು. ಇದಾದ ನಂತರ, ಚಿನ್ನಾಭರಣ ಬಿಚ್ಚಿಕೊಂಡು ಪರಾರಿಯಾಗಿದ್ದಾಳೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವೃದ್ಧನ ಮೇಲೆ ಅನುಮಾನ: ‘ಮಂತ್ರಿ ಮಾಲ್ ಸಿನಿಮಂದಿರದಲ್ಲಿರುವ ಸಿ. ಸಿ. ಟಿ. ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ದೂರುದಾರ ಹಾಗೂ ಮಹಿಳೆ, ಖುಷಿಯಿಂದ ಚಿತ್ರಮಂದಿರದೊಳಗೆ ಹೋಗಿದ್ದರು. ಸಿನಿಮಾ ಮುಗಿದ ನಂತರವೂ ಖುಷಿಯಿಂದಲೇ ಹೊರಗೆ ಬಂದಿದ್ದಾರೆ. ಹೀಗಾಗಿ, ವೃದ್ಧನ ಮೇಲೆಯೇ ಅನುಮಾನ ಬಂದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಚಿತ್ರಮಂದಿರದಲ್ಲಿ ಚಿನ್ನಾಭರಣ ಕಳವಾಗಿರುವುದಾಗಿ ವೃದ್ಧ ಹೇಳು ತ್ತಿದ್ದಾರೆ. ಪುರಾವೆ ಇಲ್ಲ. ಬೇರೆ ಕಡೆ ಕಳವಾಗಿರಬಹುದು. ಅಥವಾ ವೃದ್ಧನೇ ಮಹಿಳೆಗೆ ನೀಡಿ, ಮನೆಯಲ್ಲಿ ವಿಷಯ ಗೊತ್ತಾದ ಮೇಲೆ ದೂರು ನೀಡಿರಬಹುದು. ಹೀಗಾಗಿ, ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


