ಮಾಜಿ ಸಿಎಂ ಬೊಮ್ಮಾಯಿ ಮನೆ ಬಳಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದ ಪುಡಿ ರೌಡಿಯನ್ನ ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ. ತೌಸಿಫ್ (22) ಬಂಧಿತ ಆರೋಪಿಯಾಗಿದ್ದು, ಚಾಕುವಿನಿಂದ ಸೆಕ್ಯುರಿಟಿ ಆಲ್ಬರ್ಟ್ ಮುಖಕ್ಕೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ತನಿಖೆ ವೇಳೆ ಆರೋಪಿಯ ಕರಾಳ ಮುಖ ಅನಾವರಣಗೊಂಡಿದ್ದು, ಸೆಕ್ಯುರಿಟಿಗಾರ್ಡ್ ಗಳಿಗೆ ಹಲ್ಲೆ ಮಾಡೋದೆ ಕಾಯಕ ಮಾಡ್ಕೊಂಡಿದ್ದ ಆರೋಪಿ, ಇಲ್ಲಿವರೆಗೂ ನಾಲ್ಕು ಬಾರಿ ಸೆಕ್ಯರಿಟಿ ಗಾರ್ಡ್ ಗಳಿಗೆ ಹಲ್ಲೆ ಮಾಡಿದ್ದಾನೆ.
ಸಂಜಯನಗರ, ರಾಮಮೂರ್ತಿನಗರ ಸೇರಿದಂತೆ ನಾಲ್ಕು ಕಡೆ ಸೆಕ್ಯುರಿಟಿಗಳ ಮೇಲೆ ಹಲ್ಲೆ ನಡೆಸಿರೋದು ತನಿಖೆ ವೇಳೆ ಬಯಲಾಗಿದೆ. ಸಂಜಯ್ ನಗರದಲ್ಲಿ ಇತ್ತಿಚೆಗೆ ಸೆಕ್ಯೂರಿಟಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಸಂಜಯ್ ನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಕಳೆದ 18ರಂದು ರಾತ್ರಿ ಆರ್ ಟಿ ನಗರದ ಎಂಎಲ್‌ಎ ಲೇಔಟ್ ನಲ್ಲಿ ಮತ್ತೆ ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ್ದ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


