ಎಲ್ಲಾ ವರ್ಗದವರಿಗೂ ಅನುಕೂಲವಾಗುವ ಉದ್ದೇಶದಿಂದ ಬೆಂಗಳೂರಿನ ಮೊದಲ ಕಮ್ಯುನಿಟಿ ಮಾಲ್ “ಗ್ಲೋಬಲ್ ಡಿವಿನಿಟಿ” ಶನಿವಾರ ಅನಾವರಗೊಂಡಿದೆ.ಮೈಸೂರು ರಸ್ತೆಯಲ್ಲಿರುವ ಈ ವಿಶ್ವದರ್ಜೆಯ ಮಾಲ್ ಅನ್ನು ಖ್ಯಾತ
ಚಿತ್ರನಟ ಕಿಚ್ಚ ಸುದೀಪ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಡಿಸಿಎಂ ಡಿ. ಕೆ. ಶಿವಕುಮಾರ್, ಸಂಸದರಾದ ಡಿ. ಕೆ. ಸುರೇಶ್ ಅವರು ಉದ್ಘಾಟನೆ ಮಾಡಿದರು. ಪ್ರತಿಷ್ಠಿತ ಕಂಪನಿಗಳ ಮಳಿಗೆಯಿಂದ ಬಟ್ಟೆ, ದಿನಸಿ, ಡಿಜಿಟಲ್ ಮಳಿಗೆ, ಪಿವಿಆರ್ ಸಿನಿಮಾ, ಫುಡ್ ಕೋರ್ಟ್ ಹಾಗೂ ಪ್ಲೇ ಝೇನ್ ಸೇರಿದಂತೆ ಎಲ್ಲಾ ವರ್ಗದವರಿಗೂ ಸಲ್ಲುವ ಮಾಲ್ ಇದಾಗಿದೆ.
ಡಿಸಿಎಂ ಡಿ. ಕೆ. ಶಿವಕುಮಾರ್ ಮಾತನಾಡಿ, ”ಬೆಂಗಳೂರಿನಲ್ಲಿ ಅನೇಕ ಮಾಲ್ ಇವೆ. ಇದು ಮೊದಲ ಕಮ್ಯುನಿಟಿ ಮಾಲ್. ಇಲ್ಲಿ ಮನರಂಜನೆ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಇಲ್ಲಿ 7 ಸಿನಿಮಾ ಸ್ಕಿನ್ ಇವೆ. ಜನಸಾಮಾನ್ಯರಿಗೆ ಅನುಕೂಲ ಆಗಲೂ ಈ ಮಾಲ್ ಆರಂಭಿಸಲಾಗಿದೆ. ನಿಮ್ಮ ಆಶೀರ್ವಾದ ಸಹಕಾರ ನಮ್ಮ ಜತೆಗಿರಲಿ. ನನಗೆ ವೈಯಕ್ತಿಕ ಜೀವನ ಹಾಗೂ ರಾಜಕೀಯವಾಗಿ ಸಹಕಾರ ನೀಡಿರುವ ಎಲ್ಲರಿಗೂ ಧನ್ಯವಾದಗಳು” ಎಂದು ತಿಳಿಸಿದರು.
ನಂತರ ಮಾತನಾಡಿದ ಕಿಚ್ಚ ಸುದೀಪ್, ಮನರಂಜನೆ ಕ್ಷೇತ್ರಕ್ಕೆ ನಿಮ್ಮ ಪ್ರಯತ್ನಕ್ಕೆ ಅಭಿನಂದನೆ, ನಿಮ್ಮ ಪ್ರಯತ್ನ ಹೇಗೆ ಮುಂದುವರಿಯಲಿ” ಎಂದು ಶುಭ ಕೋರಿದರು.ರವಿಚಂದ್ರನ್ ಅವರು ಮಾತನಾಡಿ, “ಯಾವುದೇ ಕೆಲಸ ಮಾಡುವಾಗ ಉದ್ದೇಶ ಚೆನ್ನಾಗಿರಬೇಕು. ಇವರ ಉದ್ದೇಶ ಚೆನ್ನಾಗಿದೆ. ಇದು ಯಶಸ್ವಿಯಾಗಲಿದೆ. ಐಶ್ವರ್ಯ ಅವರನ್ನು ಇಂದು ನೋಡಿದೆ. ಆಕೆ ತಂದೆಗೆ ತಕ್ಕ ಮಗಳು. ಈ ಮಾಲ್ ಗೆ ಡಿವಿನಿಟಿ ಎಂಬ ಹೆಸರು ಉತ್ತಮವಾಗಿದೆ. ಎಲ್ಲರಿಗೂ ಅವಕಾಶ ಮಾಡಿಕೊಟ್ಟಿರುವುದು ಉತ್ತಮ ಪ್ರಯತ್ನ. ನಿಮಗೆ ಒಳ್ಳೆಯದಾಗಲಿ” ಎಂದು ಹಾರೈಸಿದರು ಇದೇ ಸಮಯದಲ್ಲಿ ಅತಿಥಿಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಾಡೋ ಪ್ಲೇ ಉತ್ಪನ್ನವನ್ನು ಬಿಡುಗಡೆ ಮಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


