ರಾಜ್ಯ ಬಿಜೆಪಿಯಲ್ಲಿ ಹೊಸ ಬಿಕ್ಕಟ್ಟು ಶುರುವಾಗಿದೆ. ಇದರಿಂದ ಹೈಕಮಾಂಡ್ ವರಿಷ್ಠರಿಗೂ ಶುರುವಾಗುತ್ತಾ ಮತ್ತೊಂದು ತಲೆನೋವು ಎಂಬ ಅನುಮಾನ ಹುಟ್ಟಿಕೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಈಗ ದಲಿತ ಸಮುದಾಯದ ನಾಯಕರ ಕಣ್ಣು ಬಿದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಾನು ಕೂಡ ಆಕಾಂಕ್ಷಿ ಎಂದು ಹೆಸರು ತೇಲಿ ಬಿಟ್ಟ ರಮೇಶ್ ಜಿಗಜಿಣಗಿ, ಲಿಂಗಾಯತ, ಒಕ್ಕಲಿಗ ಸಮುದಾಯದ ಜೊತೆ, ಈಗ ದಲಿತ ಸಮುದಾಯದಿಂದಲೂ ಲಾಭಿ ಹೆಚ್ಚಿದೆ.
ವಿ. ಸೋಮಣ್ಣ ಬಹಿರಂಗ ಹೇಳಿಕೆ ಬಳಿಕ ರಮೇಶ್ ಜಿಗಜಿಣಗಿಯಿಂದ ಅಧ್ಯಕ್ಷ ಸ್ಥಾನದ ಬಗ್ಗೆ ಒಲವು ತೋರಿದ್ದಾರೆ. ಡಜನ್ ಗಟ್ಟಲೇ ನಾಯಕರ ಲಾಭಿ ನಡುವೆ ರಮೇಶ್ ಜಿಗಜಿಣಗಿ ಹೊಸ ಹೆಸರು ಸೇರ್ಪಡೆಯಾಗಿದೆ. ನಾನು ಕೂಡ ಹಿರಿಯ ನಾಯಕ, ರಾಜ್ಯಾಧ್ಯಕ್ಷ ಹುದ್ದೆಗೆ ನನ್ನನ್ನೂ ಪರಿಗಣಿಸಬೇಕು ಎಂದಿದ್ದಾರೆ. ಇತ್ತ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿಯಿಂದಲೂ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಹೆಚ್ಚಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


