‘ಹಿರಿಯರಿಗೆ ಸಮಂಜಸ, ಸುರಕ್ಷತೆಯಿಂದ ಕೂಡಿದ ಮತ್ತು ಮನಸ್ಸಿಗೆ ಶಾಂತಿ ನೀಡುವ ವಾತಾವರಣ ತುಂಬಾ ಮುಖ್ಯ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಹೇಳಿದರು.
ನವ ನಿರ್ಮಾಣ್- ವಿಎನ್ಎನ್ ಪ್ರಬುದ್ಧಲಾಯ ಮತ್ತು ಆಯುರ್ಧಾಮ ಭಾನುವಾರ ಆಯೋಜಿಸಿದ್ದ ವಿಎಲ್‌ನ್ ಪ್ರಬುದ್ಧಾಲಯದ 15ನೇ ವಾರ್ಷಿಕೋತ್ಸವ, ವಿಎನ್ಎನ್ ನಿರ್ಮಾಣ್ ಹಿರಿಯ ನಾಗರಿಕರ ಅಜೀವ-ಸಾಧನಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಹೊರಗಿನ ಯಾವುದೇ ಜಂಜಾಟಗಳಿಗೆ ತಲೆಕೆಡಿಸಿಕೊಳ್ಳದೇ ಹಿರಿಯರು ನೆಮ್ಮದಿಯಿಂದ ಸುರಕ್ಷತೆಯಿಂದ ಜೀವಿಸಲು ಪ್ರಬುದ್ಧಾಲಯವು ಹಿರಿಯ ಜೀವಿಗಳಿಗೆ ಆಶ್ರಯ ಕಲ್ಪಿಸಿದೆ ಎಂದು ಹೇಳಿದರು.
ಚಿತ್ರನಟ ಶ್ರೀನಾಥ್, ‘ಪ್ರಬುದ್ಧಾಲಯದಂತಹ ಹಿರಿಯರ ಮನೆ, ವೃದ್ಧರಿಗೆ ಸ್ವಂತ ಮನೆಯ ಅನುಭವ ನೀಡುತ್ತಿದೆ. ಹಿರಿಯರ ಜೀವನದ ಸಂಧ್ಯಾ ಕಾಲಕ್ಕೆ ಆಶಾದಾಯಕವಾಗಿದ್ದು, ಸಮಾಜಕ್ಕೆ ಉತ್ತಮ ಮಾದರಿಯಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ಜೀವನದಲ್ಲಿ ಉತ್ತಮ ಸಾಧನೆ ಮಾಡಿದ ಸಿ. ತಾರಾರಂಗನ್, ಬಿ. ವಿ. ತಿಮ್ಮಪ್ಪ, ರಾಧಾ ಶ್ರೀನಾಥ್, ಪ್ರನಖ್ ಕುಮಾರ್ ಬಸು ಮತ್ತು ರುಕ್ಕಿಣಿ ಶೇಷಾದ್ರಿ ಅವರಿಗೆ ವಿ. ಎಲ್. ಎನ್. ನಿರ್ಮಾಣ್ ಹಿರಿಯ ನಾಕರಿಕರ ಅಜೀವ ಸಾಧನಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಂಸ್ಥೆಯ ಸಂಸ್ಥಾಪಕ ಲಕ್ಷ್ಮೀನಾರಾಯಣ, ಎಸ್. ಎಂ. ಪಾಟೀಲ್, ನಿರ್ದೇಶಕರಾದ ಸುಷ್ಮಾ ಮೂರ್ತಿ ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


