ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ನಮ್ಮ ನಾಯಕರಾದ ಯಡಿಯೂರಪ್ಪನವರು ಹಾಕಿದ ಕಣ್ಣೀರಿನಲ್ಲಿ ಇಡೀ ಬಿಜೆಪಿ ಕೊಚ್ಚಿಕೊಂಡು ಹೋಯಿತು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪರ ಸರ್ಕಾರಕ್ಕೆ ಎರಡು ವರ್ಷ ತುಂಬಿದಾಗ ಸಂಭ್ರಮೋತ್ಸವ ಮಾಡುವುದನ್ನು ಬಿಟ್ಟು ಅಂದೇ ಯಡಿಯೂರಪ್ಪರ ಕೈಯಲ್ಲಿ ಮುಖ್ಯಮಂತ್ರಿ ಸ್ಥಾನ ರಾಜೀನಾಮೆ ಕೊಡಿಸಿದ್ದು, ಅಂದು ಯಡಿಯೂರಪ್ಪ ಹಾಕಿದ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ ಎಂದಿದ್ದಾರೆ.
ಚುನಾವಣಾ ಹೊಸ್ತಿಲಿನಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರೆಂಟಿಗಳ ಮೇಲೆ ಗ್ಯಾರೆಂಟಿಗಳನ್ನು ಘೋಷಿಸುತ್ತಿದ್ರೆ, ಇತ್ತ ನಮ್ಮ ಬಿಜೆಪಿ ಪಕ್ಷ ಅರ್ಧ ಲೀಟರ್ ಹಾಲು ಕೊಡುತ್ತೇವೆ ಎಂದಿತ್ತು. ನಾವು ಅಂದೇ ಹೇಳಿದ್ದೆವು. ಬಹಳ ಪ್ರಬಲವಾದ ಘೋಷಣೆಗಳನ್ನು ಮಾಡಿ. ಅದನ್ನು ಯಾರೂ ಕೂಡ ಕೇಳಲೇ ಇಲ್ಲ. ಇತ್ತ ಪ್ರಣಾಳಿಕಾ ಸಮಿತಿಗೆ ಡಾ. ಕೆ. ಸುಧಾಕರ್ ಅವರನ್ನು ಅಧ್ಯಕ್ಷ ಮಾಡಿದ್ದು, ವಲಸಿಗರಿಂದಲೇ ನಾವು ಹಾಳಾಗಿದ್ದು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸುಧಾಕರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದು ಬೇಡ ಎಂದು ಹಲವು ಶಾಸಕರುಗಳು ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೆವು. ಆದ್ರೆ, ಹೈಕಮಾಂಡ್ ನಾಯಕರಿಗೆ ಕೆಲವರು ಕಿವಿಗೆ ಇಲ್ಲಸಲ್ಲದ್ದನ್ನು ಹೇಳಿ ಯಡಿಯೂರಪ್ಪರನ್ನು ಕೆಳಗೆ ಇಳಿಸಿದ್ರು. ಅಂದೇ ರಾಜ್ಯದಲ್ಲಿ ಬಿಜೆಪಿ ಸೋಲಲು ಮುಂದಾಯ್ತು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದು ಬೇಡ ಎಂದು ಹೇಳಿದ್ದೆವು. ಅಂದು ಮಾತು ಕೇಳಲಿಲ್ಲ. ಈಗ ಬಿಜೆಪಿಗೆ ಸೋಲಾಗಿದೆ ಎಂದು ಎಂ. ಪಿ. ರೇಣುಕಾಚಾರ್ಯ ಹೇಳಿದ್ದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


