ಮಹಾಭಾರತ ಕಥೆಯನ್ನಾಧರಿಸಿದ ಗುಂಡು ಸೀತಾರಾಮ್ ಅವರ ರಚನೆಯ ‘ವೀರ ಬರ್ಬರೀಕ’ ಯಕ್ಷಗಾನ ಪ್ರದರ್ಶನವು ಜೂನ್ 29ರಂದು ಸಂಜೆ 5. 30ಕ್ಕೆ ಗುಬ್ಬಲಾಳದ ಶನೈಶ್ವರ ದೇವಾಲಯದ ಜನರಂಜಿನಿ ಸಭಾಂಗಣದಲ್ಲಿ ಪ್ರದರ್ಶನವಾಗಲಿದೆ.
ಈ ಯಕ್ಷಗಾನವನ್ನು ಭರತ್ ಪರ್ಕಳ ಅವರು ನಿರ್ದೇಶಿಸಿದ್ದು, ಕಲಾ ಕದಂಬ ಆರ್ಟ್ ಸೆಂಟರ್ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಹೆಬ್ಬಾರ್, ಮದ್ದಳೆಯಲ್ಲಿ ಸಂಪತ್ ಆಚಾರ್,
ಚಂಡೆಯಲ್ಲಿ ಶ್ರೀನಿವಾಸ್ ಪ್ರಭು ಭಾಗವಹಿಸಲಿದ್ದಾರೆ.
ಮುಮ್ಮೇಳದಲ್ಲಿ ಪೂಜಾ ಆಚಾರ್ಯ, ಅದಿತಿ ಉರಾಳ್, ನಿತ್ಯಾ ಗೌಡ, ನಿಶ್ಚಿತ, ಚೈತ್ರ, ವರ್ಣ ಯು. ಶೆಟ್ಟಿ, ಅನ್ವಿತ ಸೋಮಯಾಜಿ, ಅನೀಶ್ ಸೋಮಯಾಜಿ, ಸ್ವರ್ಣ ಯು. ಶೆಟ್ಟಿ, ಚಿರಾಗ್ ಗೌಡ, ಮನೋಜ್, ಪರ್ಣಿಕ ನಾವಡ, ಧೃತಿ ಅಭಿನಯಿಸಲಿದ್ದಾರೆ. ಸಂಯೋಜನೆ, ನಿರ್ವಹಣೆಯಲ್ಲಿ ರಾಧಾಕೃಷ್ಣ ಉರಾಳ, ವಿಶ್ವನಾಥ ಉರಾಳ, ಮುರಳೀಧರ ನಾವಡ, ಸತ್ಯನಾರಾಯಣ ಬಿ. ಇದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


