ರಾಜ್ಯದಲ್ಲಿ ನಕಲಿ ನೋಟುಗಳ ಹಾವಳಿ ಮತ್ತೆ ಆರಂಭವಾಗಿದೆ. ಕಳೆದ ಎರಡು ದಿನಗಳ ಅಂತರದಲ್ಲಿ 100 ರೂಪಾಯಿ ಬೆಲೆಯ ಒಟ್ಟು 30 ನೋಟುಗಳು ಪತ್ತೆಯಾಗಿವೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್ ದಾಖಲಾಗಿದೆ.
ಆರ್ ಬಿಐ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ, ಕೆನರಾ, ಯುಬಿಐ ಬ್ಯಾಂಕ್ ಮ್ಯಾನೇಜರ್ ಗಳು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಉಡುಪಿ, ಮಣಿಪಾಲ, ಹುಬ್ಬಳ್ಳಿ ಹಾಗೂ ಮಲ್ಲೇಶ್ವರ ಬ್ರಾಂಚ್ ನ ಬ್ಯಾಂಕ್ ಗಳಲ್ಲಿ ನಕಲಿ ನೋಟು ಪತ್ತೆಯಾಗಿದ್ದವು. ಆರ್ ಬಿ ಐ ಗೆ ರಿಮೀಟ್ ಮಾಡುವ ಸಂದರ್ಭದಲ್ಲಿ ನಕಲಿ ನೋಟು ಪತ್ತೆಯಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್ ಪೊಲೀಸರು ನಕಲಿ ನೋಟಿನ ಜಾಲದ ಹಿಂದೆ ಬಿದ್ದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


