ಚಾತುವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು ಶೂದ್ರರಿಗೆ ಶಿಕ್ಷಣ ಭಾಗ್ಯವನ್ನು ಕಲ್ಪಿಸಿ ಕ್ರಾಂತಿ ಮಾಡಿದವರು ವಚನಕಾರರು ಮತ್ತು ಬಸವಣ್ಣನವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಟೌನ್ ಹಾಲ್ ನಲ್ಲಿ ಫ.ಗು.ಹಳಕಟ್ಟಿ ಫೌಂಡೇಶನ್ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಅತ್ಯಂತ ಕೆಳ ಜಾತಿಯಲ್ಲಿ ಜನಿಸಿ ಅತ್ಯುನ್ನತ ಎತ್ತರಕ್ಕೆ ಏರಿದ ಅಲ್ಲಮಪ್ರಭುರನ್ನು ಅನುಭವ ಮಂಟಪದ ಮುಖ್ಯಸ್ಥರನ್ನಾಗಿಸಿದ್ದರು. ಈ ಅನುಭವ ಮಂಟಪದ ಆಶಯವನ್ನು, ವಚನಗಳ ಮಹತ್ವವನ್ನು ಮುಂದಿನ ತಲೆಮಾರುಗಳಿಗೆ ದಾಟಿಸಿದವರಲ್ಲಿ ಫ.ಗು.ಹಳಕಟ್ಟಿಯವರು ಪ್ರಮುಖರು ಎಂದರು.
“ಹುಟ್ಟುವಾಗ ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ, ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ” ಎನ್ನುವ ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿ ವಿದ್ಯಾವಂತರೂ ಮೌಡ್ಯ ಮತ್ತು ಜಾತಿಯ ವ್ಯಸನಿಗಳಾಗಿದ್ದಾರೆ ಎಂದು ತಿಳಿಸಿದರು.
ಚಾತುವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ, ಸಂಪತ್ತಿನಿಂದ ಶೂದ್ರ ಸಮುದಾಯ ವಂಚಿತವಾಗಿತ್ತು. ಅದಕ್ಕೇ ಕಾಯಕ ಮತ್ತು ದಾಸೋಹ ಸಂಸ್ಕಾರದ ಮೂಲಕ ಸರ್ವರಿಗೂ ಶಿಕ್ಷಣ ಮತ್ತು ಅವಕಾಶಗಳಲ್ಲಿ ಸಮಪಾಲು ಸಿಗುವಂತೆ ಮಾಡಿದ್ದು ಬಸವಣ್ಣನವರು. ನಾನು ಮೊದಲ ಬಾರಿ ಮತ್ತು ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಇದೇ ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಪಾಲಿಸುತ್ತಿದ್ದೇನೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


