ಭಾರತೀಯ ನಾಮಫಲಕ ಕುಂಚ ಕಲಾವಿದರ ಸಂಘ (ರಿ ) . ಕೇಂದ್ರ ಕಛೇರಿ ಬೆಂಗಳೂರು ಇಲ್ಲಿ ಇಂದು ರಾಜ್ಯಾಧ್ಯಕ್ಷರು ಮತ್ತು ಚಲನಚಿತ್ರ ಕಲಾ ನಿರ್ದೇಶಕರಾದ ಎನ್. ಕುಮಾರ್ ಮತ್ತು ರಾಜ್ಯ ಉಪಾಧ್ಯಕ್ಷರಾದ ಕಲೆಗಾರ ಕೇಶವ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ನೆನಪು ಲೋಕೇಶ್ ಅವರ ನೇತೃತ್ವದಲ್ಲಿ ಇಂದು ಗುರು ಪೂರ್ಣಿಮೆಯ ಅಂಗವಾಗಿ ನಡೆದ ಅರವತ್ತು ವರ್ಷ ದಾಟಿದ ಹಿರಿಯ ಕುಂಚ ಕಲಾವಿದರಿಗೆ ಕುಂಚ ಗುರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.


ಇದೇ ವೇಳೆ ಯುವ ಕುಂಚ ಕಲಾವಿದರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ರಾಜ್ಯ ಮತ್ತು ನೆರೆಯ ರಾಜ್ಯಗಳ ಕುಂಚ ಕಲಾವಿದರುಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕುಂಚ ಕಲಾವಿದ ಸಾಹಿತಿ ಗಾಯಕ ನಿರ್ದೇಶಕರಾದ ಶ್ರೀ ಕಲಾಕಾರ್ ಹುಲಿಕುಂಟೆ ಮುನ್ನಾ ಆರ್ಟ್ಸ್, ಅಸ್ಲಾಂ ಆರ್ಟ್ಸ್, ಸನ್ ಆರ್ಟ್ಸ್, ಆನಂದ್ ಆರ್ಟ್ಸ್, ವಿಷ್ಣು ಆರ್ಟ್ಸ್, ನವೀನ್ ಆರ್ಟ್ಸ್, ಎಸ್ ಪಿ ಆರ್ಟ್ಸ್ ಮತ್ತಿತರರು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


