ರಾಷ್ಟ್ರಪತಿ ಭವನದಿಂದ ಬುಡಕಟ್ಟು ಜನರಿಗೆ ಉಡುಗೊರೆ ಸಿಕ್ಕಿದೆ ಎಂದು ಯುವಜನ ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದ್ದಾರೆ. ಇಂದು ಬುಡಕಟ್ಟು ಜನಾಂಗದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಕೊರಗ ಹಾಗೂ ಜೇನುಕುರುಬ ಬುಡಕಟ್ಟುಗಳ ಜನರಿಗೆ ರಾಷ್ಟ್ರಪತಿ ಭವನದಿಂದ ತಂದಿದ್ದ ಉಡುಗೊರೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಿತರಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಸಚಿವರಾದ ಬಿ. ನಾಗೇಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ನೈಜ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು.
ರಾಜ್ಯಪಾಲರಾದ ಥಾವರಚಂದ್ ಗೆಹೋಟ್ ಅವರ ಸಮ್ಮುಖದಲ್ಲಿ ನಡೆದ ಬುಡಕಟ್ಟು ಸಮುದಾಯಗಳೊಂದಿಗಿನ ಸಂವಾದದಲ್ಲಿ ಗುಂಡ್ಲುಪೇಟೆಯ ದೇಶಿಪುರ ಕಾಲೊನಿಯ ಸಿದ್ದಮ್ಮ, ಪುಟ್ಟಮ್ಮ, ಮದ್ದೂರು ಕಾಲೊನಿಯ ಗೋವಿಂದ, ಎಚ್. ಡಿ. ಕೋಟೆಯ ಬಸಮ್ಮ, ರಾಜೇಶ್, ಅಯ್ಯಪ್ಪ, ಭೈರಾ, ಸಿ. ಭಾಸ್ಕರ, ಪುಟ್ಟಬಸವಯ್ಯ, ಹುಣಸೂರಿನ ಜೆ. ಪಿ. ಪಾರ್ವತಿ, ಸುಮಾ, ರಾಜಪ್ಪ, ಸಚಿನ್, ಪಿರಿಯಾಪಟ್ಟಣದ ಜಯಮ್ಮ, ಗೌರಿ, ಲಕ್ಷ್ಮೀ, ಜಾನಕಮ್ಮ, ಬಸವಣ್ಣ, ಬಸಪ್ಪ, ಸರಗೂರಿನ ವಿಜಯ್, ಸೋಮವಾರಪೇಟೆಯ ಜೆ.ಕೆ. ಮುತ್ತಮ್ಮ, ಬಿ. ಕೆ. ಧರ್ಮಪ್ಪ, ಉಡುಪಿ ಜಿಲ್ಲೆಯ ನಳಿನಿ, ಡಾ. ಸಬಿತಾ, ಸುಶೀಲಾ, ಪ್ರಕೃತಿ, ಶಕೀಲಾ, ಸುನಂದಾ, ಕುಡ್ವಾ, ಬಾಬು, ರಮೇಶ್, ಕೊಗ್ಗ, ಅಕ್ಷಯ್, ಕುಮಾರ್, ಸಂಜೀವ ಕೊರಗ, ಕೆ. ಪುತ್ರಯ, ದಕ್ಷಿಣ ಕನ್ನಡ ಜಿಲ್ಲೆಯ ರತ್ನ, ಚಂದ್ರವತಿ, ಶಶಿಕಲಾ, ರಾಧಾ, ಎಂ. ಸುಂದರ್, ಬಾಬು, ಮಥಾಡಿ, ಶ್ಯಾಮ್ ಸೇರಿದಂತೆ ಮೈಸೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಆಗಮಿಸಿದ್ದ ಜೇನುಕುರುಬ ಹಾಗೂ ಕೊರಗ ಬುಡಕಟ್ಟು ಸಮುದಾಯಗಳ 50 ಜನ ಭಾಗವಹಿಸಿ ತಮ್ಮ ಸಾಂಸ್ಕೃತಿಕ, ಸಾಮಾಜಿಕ ಅಸ್ಮಿತೆಯ ವಿಶಿಷ್ಟತೆಗಳನ್ನು ಸಾರಿದರು.
ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ. ಎಸ್. ಕಾಂತರಾಜು ಮತ್ತಿತರ ಗಣ್ಯರು ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


