ಶಾಲೆ ಕಟ್ಟಡ ಪೂರ್ಣಗೊಳ್ಳದೆ ಬಿಲ್ ಪಾವತಿ ಮಾಡಿರುವ ಇಬ್ಬರು ಎಂಜಿನಿಯರ್‌ಗಳನ್ನು ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಾಜರಾಜೇಶ್ವರಿನಗರ ವಲಯದ ಜ್ಞಾನಭಾರತಿ ವಾರ್ಡ್‌ನಲ್ಲಿ ಎರಡು ಅಂತಸ್ತಿನ ಶಾಲಾ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಯೋಜನೆ ಪೂರ್ಣಗೊಳ್ಳದಿದ್ದರೂ ಅಂದಾಜು ವೆಚ್ಚದ ಶೇ 90ರಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಲಗ್ಗೆರೆಯಲ್ಲಿಯೂ ಶಾಲಾ ಕಟ್ಟಡ ನಿರ್ಮಾಣವಾಗದಿದ್ದರೂ ಹಣ ಪಾವತಿ ಮಾಡಿರುವುದು ಎಂದು ಟಿವಿಸಿಸಿ ತನಿಖೆಯಿಂದ ತಿಳಿದುಬಂದಿತ್ತು.
ಜ್ಞಾನಭಾರತಿ ಶಾಲಾ ಯೋಜನೆಯಲ್ಲಿ 14. 57 ಕೋಟಿ ಮೊತ್ತದ ಬಿಲ್ ಅನ್ನು ಕಾಮಗಾರಿ ಪರಿಶೀಲನೆ ನಡೆಸದೆ ಪಾವತಿಸಲಾಗಿದೆ. ಈ ಕಟ್ಟಡ ಶ್ರೀಗಂಧದ ಕಾವಲ್ ಕೆರೆಗೆ ಹೊಂದಿಕೊಂಡಂತೆಯೇ ಇದೆ. ಇನ್ನು, ಲಗ್ಗೆರೆ ಶಾಲಾ ಯೋಜನೆಯ ಅಂದಾಜು ಮೊತ್ತ F6. 5 ಕೋಟಿಯಾಗಿತ್ತು. ಮುಖ್ಯ ಆಯುಕ್ತರ ಗಮನಕ್ಕೆ ತಾರದೆಯೇ ಈ ಮೊತ್ತವನ್ನು 110 ಕೋಟಿಗೆ ಹೆಚ್ಚಿಸಿಕೊಳ್ಳಲಾಗಿದೆ. ಅಲ್ಲದೆ, ಈ ಕಟ್ಟಡವನ್ನು ಬಿಡಬ್ಲ್ಯುಎಸ್‌ಎಸ್‌ಬಿಯ ಕೊಳವೆ ಮಾರ್ಗದ ಮೇಲೆಯೇ ನಿರ್ಮಿಸಲಾಗುತ್ತಿತ್ತು ಎಂದು ತನಿಖೆಯಿಂದ ಗೊತ್ತಾಗಿದೆ.
ಟಿವಿಸಿಸಿ ವರದಿ ಆಧಾರದ ಮೇಲೆ, ಆರ್. ಆರ್. ನಗರದ ಯೋಜನೆ ವಿಭಾಗದ ಸಹಾಯಕ ಎಂಜಿನಿಯರ್‌ಗಳಾದ ಕೆ. ಮಂಜೇಗೌಡ ಹಾಗೂ ಎಚ್. ಎಂ. ತಿಮ್ಮಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯ ಎಂಜಿನಿಯರ್ ವಿಜಯಕುಮಾರ್ ನಿವೃತ್ತರಾಗಿದ್ದಾರೆ. ಕಾರ್ಯಪಾಲಕ ಎಂಜಿನಿಯರ್‌ಗಳಾದ ಮೋಹನ್ ಕೊಂಡನಕೇರಿ, ಭಾರತಿ, ಸರೀಶ್ ಅವರ ಅಮಾನತಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


