ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕಟ್ಟಿನ ಮಾತಿನಂತೆ ನಡೆದರೆ ಮಾತ್ರ ಕಾರ್ಯ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ಸಮಾಜದ ಸಚಿವರು ಮತ್ತು ಶಾಸಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದಾಯದ ಒಗ್ಗಟ್ಟಿನ ಮಾತು ಯಾವಾಗಿನಿಂದಲೂ ಹೇಳುತ್ತಿದ್ದೇವೆ. ಬರೆ ಮಾತನಾಡಿದರೆ ಏನೂ ಪ್ರಯೋಜನ ಇಲ್ಲ. ಮಾತಿನಂತೆ ನಡೆದರೆ ಮಾತ್ರ ಕಾರ್ಯ ಸಾಧ್ಯ ಎಂದು ಬೊಮ್ಮಾಯಿ ಹೇಳಿದರು.
ಬಸವಣ್ಣನ ತತ್ವದಡಿ ಪ್ರಜಾಪ್ರಭುತ್ವ ಆರಂಭವಾಗಿದೆ. ಅಂಬೇಡ್ಕರ್ ಅವರು ಅದನ್ನು ಪಾಲಿಸಿದ್ದಾರೆ. ಯಾರೊ ಲಿಂಗಾಯತ ಸಿಎಂ ಆದರೆ, ಲಿಂಗಾಯತರ ಬಡತನ ಹೋಗುವುದಿಲ್ಲ. ದುಡಿಮೆ ನಮ್ಮ ಮೂಲ ತತ್ವ, ಕಾಯಕ ಮಾಡುವುದನ್ನು ನಾವು ಬಿಡಬಾರದು. ಕಾಯಕ ಮಾತ್ರ ನಮ್ಮ ಬಡತನ ಹೋಗಲಾಡಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವ ಶಂಕರಪ್ಪ, ಸಚಿವರಾದ ಎಂ. ಬಿ. ಪಾಟೀಲ, ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳರ, ಶಿವಾನಂದ ಪಾಟೀಲ, ಶರಣ ಪ್ರಕಾಶ ಪಾಟೀಲ ಹಾಗೂ ಸಮಾಜದ ಶಾಸಕರು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


