ಜೈನಮುನಿಗಳ ಹತ್ಯೆಗೆ ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣ ಮಾಳಿ, ಹುಸೇನ್ ಢಾಲಾಯತ್ ಬಂಧಿತ ಆರೋಪಿಗಳು. ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ನಾರಾಯಣ ಮಾಳಿ, ಜೈನಮುನಿ ಆಶ್ರಮದ ಬಳಿ ಜಮೀನು ಲೀಸ್ ಪಡೆದು ಉಳುಮೆ ಮಾಡುತ್ತಿದ್ದ. ಇದೇ ವೇಳೆ ಜೈನಮುನಿಗೆ ಆಪ್ತನಾಗಿದ್ದು, ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಜೈನಮುನಿಗಳ ವಿಶ್ವಾಸಗಳಿಸಿದ್ದ.
ವೈಯಕ್ತಿಕ ಕಾರಣಕ್ಕೆ ಮಾಳಿ ಜೈನಮುನಿಗಳ ಬಳಿ 6 ಲಕ್ಷ ರೂ. ಹಣ ಪಡೆದಿದ್ದ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿಗಳ ಕೊಲೆಗೈಯಲಾಗಿದೆ ಎನ್ನಲಾಗುತ್ತಿದೆ. ಜು.5ರ ರಾತ್ರಿ ಹಿರೇಕೋಡಿ ನಂದಿಪರ್ವತ ಆಶ್ರಮದ ಕೋಣೆಯಲ್ಲೇ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ನಡೆದಿದೆ.
ವಿದ್ಯುತ್ ಶಾಕ್ ನೀಡಿ ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಬಳಿಕ ಸ್ನೇಹಿತ ಹುಸೇನ್‌ಗೆ ಕರೆಮಾಡಿ ಕರೆಸಿಕೊಂಡಿದ್ದ. ಇಬ್ಬರು ಮೃತದೇಹ ಕತ್ತರಿಸಿ ಬಟ್ಟೆ ಸುತ್ತಿ ಕೊಳವೆಬಾವಿಗೆ ಎಸೆದಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


