ಜನಮನ ಪ್ರತಿಷ್ಠಾನ ಹಾಗೂ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ‘ಪ್ರಬುದ್ಧ ಕರ್ನಾಟಕ: ಜನಮನ ಸಮಾವೇಶ ಇಂದಿಲ್ಲಿ ಜರುಗಿತು. ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಸಾಹಿತ್ಯ ಕಲೆಗಳಿಗೆ ಉತ್ತೇಜನ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆ’ ಕುರಿತು ವಿಷಯ ಮಂಡಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವೆಂದು ಕರೆದರು. ಆದರೆ, ಮತೀಯ ಶಕ್ತಿಗಳು ಅದನ್ನು ಒಪ್ಪದೇ ತಮ್ಮ ರಾಜಕೀಯ ಕಾರಣಕ್ಕಾಗಿ ರಾಜ್ಯದಲ್ಲಿ ಶಾಂತಿ ಕದಡುತ್ತಿವೆ. ಅಲ್ಲದೇ ಸೌಹಾರ್ದ ವಾತಾವರಣವನ್ನೇ ನಾಶ ಮಾಡಲು ಹೊರಟಿವೆ’ ಎಂದು ಆಪಾದಿಸಿದರು.
ಶಿಕ್ಷಣ ತಜ್ಞ ಪ್ರೊ. ವಿ. ಪಿ. ನಿರಂಜನಾರಾಧ್ಯ ಅವರು ‘ಪ್ರಾಥಮಿಕ ಶಿಕ್ಷಣವನ್ನು ಮಕ್ಕಳ ಜ್ಞಾನ ವಿಕಸನ ನೆಲೆಯಲ್ಲಿ ಪರಿಣಾಮಕಾರಿ ಮಾರ್ಗೋಪಾಯಗಳು’ ಕುರಿತು ಮಾತನಾಡಿ, ‘ಎಲ್ಲರಿಗೂ ಶಿಕ್ಷಣದ ಹಕ್ಕು ಪರಿಣಾಮಕಾರಿ ಹಾಗೂ ಪ್ರಾಮಾಣಿಕವಾಗಿ ಜಾರಿಗೊಳ್ಳಬೇಕಿದೆ’ ಎಂದರು.
ಸಾಹಿತಿ ಜಿ. ರಾಮಕೃಷ್ಣ ಮಾತನಾಡಿ, ‘ಸಮಾವೇಶದಲ್ಲಿ ಮಂಡನೆಯಾದ ವಿಷಯಗಳ ಸಂಕ್ಷಿಪ್ತ ಸಾರವನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ಎಲ್ಲ ಸಮಸ್ಯೆಗಳಿಗೂ ಅವರು ಪರಿಹಾರ ಹುಡುಕುವ ಭರವಸೆ ಇದೆ’ ಎಂದರು.
ಡಾ. ಎಚ್. ಜಯಪ್ರಕಾಶ್ ಶೆಟ್ಟಿ, ಡಾ. ಟಿ. ಆರ್. ಚಂದ್ರಶೇಖರ್, ಪ್ರೊ. ರಾಜೇಂದ್ರ ಪೌದ್ದಾರ್ ವಿಷಯ ಮಂಡಿಸಿದ್ದರು. ಜನಮನ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


