ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ದೇವರಚಿಕ್ಕನಹಳ್ಳಿಯಲ್ಲಿ ಕಾಂಪೌಂಡ್ ಅನ್ನು ಬಿಡಿಎ ಸೋಮವಾರ ತೆರವುಗೊಳಿಸಿದೆ.
ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ. 40/1ರಲ್ಲಿನ ಒಂದು ಎಕರೆ 12 ಗುಂಟೆ ಜಮೀನು ಬಿಟಿಎಂ 4ನೇ ಹಂತ 2ನೇ ಬ್ಲಾಕ್ ಬಡಾವಣೆಗೆ 1990ರಲ್ಲಿ ಅಂತಿಮ ಅಧಿಸೂಚನೆಯಾಗಿತ್ತು. ಈ ಪ್ರದೇಶದಲ್ಲಿ 26 ಗುಂಟೆ ಕೃಷ್ಣಾರೆಡ್ಡಿ ಮತ್ತು 26 ಗುಂಟೆಗೆ ಹುಚ್ಚಮ್ಮ ಭೂಮಾಲೀಕರಾಗಿದ್ದರು. 2022ರ ಜ. 28ರಂದು ಹುಚ್ಚಮ್ಮ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ 26 ಗುಂಟೆ ಪ್ರದೇಶಕ್ಕೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಆದೇಶ ನೀಡಿತ್ತು. ಆದರೆ, ನ್ಯಾಯಾಲಯ ಆದೇಶ ಉಲ್ಲಂಘಿಸಿ ಕಾಂಪೌಂಡ್ ನಿರ್ಮಿಸುತ್ತಿದ್ದರು. ಇದನ್ನು ತೆರವುಗೊಳಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷ್ಣಾರೆಡ್ಡಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡುಡಿ ಪ್ರಕರಣದಲ್ಲಿ ಹೈಕೋರ್ಟ್, ಬಿಡಿಎ ವಿರುದ್ಧ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿ, 2022ರ ಸೆ. 27ರಂದು ‘ಫಾರ್ ನಾನ್ ಪ್ರಾಸಿಕ್ಯೂಷನ್’ ಎಂದು ತೀರ್ಪನ್ನು ನೀಡಲಾಗಿದೆ. ನಂತರ ಬಿಡಿಎ ಅಧಿಕಾರಿಗಳು ಈ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಪ್ರಾಧಿಕಾರದ ವತಿಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಲು ತಿಳಿಸಲಾಗಿತ್ತು. ಸದರಿ ಪ್ರದೇಶದಲ್ಲಿ ಕಾಮಗಾರಿಯು ನಡೆಯುತ್ತಿದ್ದರಿಂದ ಹೈಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


