ಮಧುಗಿರಿ: ಪಟ್ಟಣದ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ. ಎನ್ ಹನುಮಂತರಾಯಪ್ಪ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಸ್ಥಿರ ಠೇವಣಿ ಮಾಡಿದ ಖಾತೆ ಪುಸ್ತಕವನ್ನು ಪೋಷಕರ ಸಮೂಹದಲ್ಲಿ ವಿದ್ಯಾರ್ಥಿನಿಯರಿಗೆ ವಿತರಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿ, ಈ ಶಾಲೆಯ ಶಿಕ್ಷಕಿ ಶೋಭಾ ಎಂ.ಎಲ್. ಕಾಳಜಿ, ನೇತೃತ್ವದಲ್ಲಿ ಶಾಲಾ ಶಿಕ್ಷಕರ ಹಾಗೂ ದಾನಿಗಳ ಸಹಕಾರದಿಂದ ಶಾಲೆಯ ಇಬ್ಬರು ಬಡ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಉಳಿತಾಯ ಯೋಜನೆ ಅಡಿಯಲ್ಲಿ ತಲಾ 15 ಸಾವಿರ ಸ್ಥಿರ ಠೇವಣಿ ಮಾಡಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗಿರುವುದು ತುಂಬಾನೇ ಒಳ್ಳೆಯ ವಿಚಾರ ಇಂತಹ ಸಮಾಜಮುಖಿ ಕಾರ್ಯಗಳಿಗೆ ನನ್ನ ಸಹಕಾರ ಎಂದಿಗೂ ಸಹ ಇರುತ್ತದೆ ಎಂದು ತಿಳಿಸಿದರು.
ನಾವು ಬದುಕಿರುವಾಗಲೇ ಸಾರ್ಥಕವಾಗುವ ರೀತಿಯಲ್ಲಿ ಸಂಪಾದಿಸಿದ ಹಣದಲ್ಲಿ ಒಂದಿಷ್ಟು ಭಾಗವನ್ನು ಸಮಾಜಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ದಾನ ಮಾಡುವುದು ತುಂಬಾನೇ ಶ್ರೇಷ್ಠ, ಅಂದು ಸಿದ್ದಗಂಗೆಯ ಡಾ.ಶ್ರೀ ಶಿವಕುಮಾರ್ ಸ್ವಾಮಿಯವರು ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ್ದರಿಂದ ಆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಗಳಿಸಿ ಇಂದು ಉನ್ನತ ಸ್ಥಾನಗಳನ್ನು ಅಲಂಕರಿಸುವರುವುದು ನಾವು ನೋಡಬಹುದು ಆದ್ದರಿಂದ ಇಂತಹ ಕಾರ್ಯಗಳು ಸಮಾಜದಲ್ಲಿ ಮುಂದುವರೆಯಲಿ ಎಂದು ಆಶಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂಜಯ್ ಮಾತನಾಡಿ, ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಬಡ ವಿದ್ಯಾರ್ಥಿಗಳಿಗೆ ಇಂತಹ ಸಮಾಜಮುಖಿ ಕಾರ್ಯಗಳಿಂದ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಶಕ್ತಿ ತುಂಬುವ ಕೆಲಸವಾಗಿದ್ದು, ನಮ್ಮ ಜನಪ್ರತಿನಿಧಿಗಳು ಇಂತಹ ಕಾರ್ಯಗಳಿಗೆ ಕೈಜೋಡಿಸಿ ಸರಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಉನ್ನತಿಕರಣಕ್ಕೆ ಸಹಕರಿಸಿ ಎಂದರು.
ಉಳ್ಳವರಿಗೆ ದಾನಮಾಡುವ ಮನಸ್ಸು ಇರಲ್ಲ, ಕೇವಲ ಕೆಲವರಿಗೆ ಮಾತ್ರ ದಾನ ಮಾಡುವ ಸದ್ಗುಣ ಇರುತ್ತದೆ, ನಾನು ಸಹ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದಾಗಿ ಶಾಲಾ ಶಿಕ್ಷಕಿ ಶೋಭಾ ಎಂ ಎಲ್ ವಿಚಾರ ವ್ಯಕ್ತಪಡಿಸುತ್ತಾ, ನಮ್ಮ ಶಾಲೆಯ ಏಳನೇ ತರಗತಿ “ಕೀರ್ತನ” ಹಾಗೂ ಎಂಟನೇ ತರಗತಿಯ “ಅನಿತಾ” ಇಬ್ಬರು ವಿದ್ಯಾರ್ಥಿನಿಯರಿಗೆ ಅವರ ಮನೆಯ ಪರಿಸ್ಥಿತಿಯನ್ನು ಗುರುತಿಸಿ ಮುಂದೆ ಯಾವುದೇ ಉನ್ನತ ಶಿಕ್ಷಣಕ್ಕೆ ತೊಂದರೆಯಾಗದಿರಲಿ ಎಂದು ದಾನಿಗಳಾದ ಶಿಕ್ಷಕ ಗಂಗಾಧರ, ಶೈಲಜಾ, ಶಂಕರ್ ಸ್ಟುಡಿಯೋ ನಾಗರಾಜ್, ವಕೀಲರಾದ ನರಸೇಗೌಡ ಇವರ ಸಹಕಾರದಿಂದ ಅಂಚೆ ಕಚೇರಿಯಲ್ಲಿ ಎಫ್, ಡಿ ಮಾಡಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ, ಆರ್, ಸಿ ಹನುಮಂತ ರಾಯಪ್ಪ, ಇ,ಸಿ,ಓ ಪ್ರಾಣೇಶ್, ರಮೇಶ್ ಎಸ್ ವಿ, ಅಶ್ವತಯ್ಯ, ಶಾಲೆಯ ಮುಖ್ಯ ಶಿಕ್ಷಕರು, ಪೋಷಕರು ಹಾಗೂ ಶಾಲೆ ವಿದ್ಯಾರ್ಥಿಗಳು ಇದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


