ಸರ್ಕಾರಿ ಪ್ರೌಢಶಾಲೆ ಕತ್ರಿದಡ್ಡಿ ಶಾಲಾವಿದ್ಯಾರ್ಥಿಗಳು ಕತ್ತಲದಿಂದ ವಿದ್ಯಾಭ್ಯಾಸಕ್ಕೆ ಆಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾವೇ ಹೊಸ ಸಂಶೋಧನೆ ಮಾಡಿ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುವುದರ ಮೂಲಕ ಸರಕಾರಿ ಶಾಲೆ ಮಕ್ಕಳು ಎಲ್ಲದಕ್ಕೂ ಸೈ ಎನ್ನುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ಆರು ಜನ ವಿದ್ಯಾರ್ಥಿಗಳಾದ ಸುದೀಪ್ ಹತ್ತಿ , ಸುನಿಲ ಮಾಶೇಕರ್, ಗಂಗಪ್ಪ ಈಗಣಿ, ಸುದೀಪ್ ತೋಪು ಕಾಣಿ, ಪ್ರೇಮ್ ಕುಮಾರ್ ಮಾರುತಿ ಹಟ್ಟಿ ಹೋಳಿ, ಮಹಾದೇವ್ ದವ್ದಾಡ, 9ನೇ ತರಗತಿಯ ವಿದ್ಯಾರ್ಥಿಗಳು ಲೈಟ್ ಬೆಳಕಿನ ಮೂಲವನ್ನು ಬಳಸಿಕೊಂಡು ನೂತನ ಮಾದರಿಯ ಪೆನ್ನನ್ನು ರಚಿಸಿದ್ದಾರೆ.
ತಮ್ಮ ಗ್ರಾಮದಲ್ಲಿ ಆಗಾಗ ವಿದ್ಯುತ್ ಕಡಿತದಿಂದಾಗುವ ಸಮಸ್ಯೆಗೆ, ವಿದ್ಯಾಭ್ಯಾಸಕ್ಕೆ ಆಗುವ ತೊಂದರೆಗಳಿಗೆ ತಾವೇ ಪರಿಹಾರ ಹುಡುಕಿಕೊಂಡಿದ್ದಾರೆ. ತಮ್ಮ ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಲೈಫ್ ಸ್ಟಾರ್ ಪೆನ್ನಿಗೆ ಜೋಡಿಸಿ ಬೆಳಕಿನ ಮೂಲವನ್ನು ಕಂಡುಹಿಡಿದಿದ್ದಾರೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw


