ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿ, ಕೋಪಗೊಂಡ ಹೆಂಡತಿ ಸ್ಟೇರಿಂಗ್ ಎಳೆದಿದ್ದರಿಂದ ಕಾರು ಉರುಳಿಬಿದ್ದು ಅಪಘಾತ ಸಂಭವಿಸಿದೆ.
ಕೆ. ಆರ್. ಮಾರುಕಟ್ಟೆ ಕಡೆಯಿಂದ ಹಲ್ಸನ್ ವೃತ್ತದ ಮಾರ್ಗವಾಗಿ ಕೆಂಪೇಗೌಡ ರಸ್ತೆಯತ್ತ ಐ-20 ಕಾರು ಹೊರಟಿತ್ತು. ಮಾರ್ಗ ಮಧ್ಯೆಯೇ ಕಾರು ಉರುಳಿ ಬಿದ್ದಿದ್ದು, ಕಾರಿನಲ್ಲಿದ್ದ ದಂಪತಿ ಗಾಯಗೊಂಡಿದ್ದಾರೆ ಎಂದು ಹಲಸೂರು ಗೇಟ್ ಸಂಚಾರ ಪೊಲೀಸರು ತಿಳಿಸಿದರು.
‘ಕಾರಿನಲ್ಲಿ ಗಂಡ-ಹೆಂಡತಿ ಹೊರಟಿದ್ದರು. ಗಂಡ ಕಾರು ಚಲಾಯಿಸುತ್ತಿದ್ದ. ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಸಿಟ್ಟಾದ ಹೆಂಡತಿ, ಸ್ಟೇರಿಂಗ್ ಎಳೆದಿದ್ದರಿಂದ ಕಾರು ಉರುಳಿ ಬಿದ್ದಿರುವುದಾಗಿ ಗೊತ್ತಾಗಿದೆ. ಕಾರಿನಲ್ಲಿ ಸಿಲುಕಿದ್ದ ದಂಪತಿಯನ್ನು ಸ್ಥಳೀಯರು ರಕ್ಷಿಸಿ ಹೊರಗೆ ಕರೆತಂದಿದ್ದಾರೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದರು.
‘ಗಂಡ ಪಾನಮತ್ತನಾಗಿ ಕಾರು ಚಲಾಯಿಸುತ್ತಿದ್ದ ಮಾಹಿತಿ ಇದ್ದು, ವೈದ್ಯಕೀಯ ವರದಿ ಬರಬೇಕಿದೆ. ಇಬ್ಬರಿಂದಲೂ ಹೇಳಿಕೆ ಪಡೆಯಬೇಕಿದೆ’ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


