ರೌಡಿ ಶೀಟರ್ ಕಪೀಲ್ ಮರ್ಡರ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿವೆ.
ಡಿಜೆ ಹಳ್ಳಿಯಲ್ಲಿ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡ್ತಿದ್ದ ರೌಡಿ ಶೀಟರ್ ಕಪಿಲ್ ನನ್ನು ಜುಲೈ 12 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹಂತಕರು ಆತನನ್ನು ಅಟ್ಟಾಡಿಸಿ ಕೊಂದಿದ್ದಾರೆ. ಈ ಡೆಡ್ಲಿ ಅಟ್ಯಾಕ್ ಸಿಸಿಟಿವಿ ದೃಶ್ಯ ಈಗ ವೈರಲ್ ಆಗುತ್ತಿದೆ. ಮುಖಕ್ಕೆ ಮಾಸ್ಕ್, ಹೆಲ್ಮಟ್ ಧರಿಸಿದ್ದ ಆರೋಪಿಗಳು ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕಪಿಲ್ ಮೇಲೆ ಹಲ್ಲೆ ಮಾಡಿದ್ದರು. ಜೀವವನ್ನು ಉಳಿಸಿಕೊಳ್ಳಲು ಕಪಿಲ್ ಕೊನೆ ಹಂತದವರೆಗೂ ಯತ್ನಿಸಿದ್ದರು. ಅದರೆ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಸುಮಾರು ನೂರು ಮೀಟರ್ ಅಟ್ಟಾಡಿಸಿಕೊಂಡು ಹೋಗಿ ಮನಸೋ ಇಚ್ಚೆ ಕತ್ತರಿಸಿ ಹಾಕಿದ್ದಾರೆ. ಸದ್ಯ ಪ್ರಕರಣ ಸಂಬಂಧ ಏಳು ಜನ ಆರೋಪಿಗಳನ್ನು ಡಿ ಜೆ ಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


