ನಗರದ ಸಮಗ್ರ ಅಭಿವೃದ್ಧಿಗೆ ರೂಪಿಸಲಾಗುತ್ತಿರುವ ‘ಬ್ಯಾಂಡ್ ಬೆಂಗಳೂರು’ ಯೋಜನೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
‘ಬ್ಯಾಂಡ್ ಬೆಂಗಳೂರು’ ರಚಿಸಲು ಪೋರ್ಟಲ್ ಮೂಲಕ ನಾಗರಿಕರಿಂದ ಬರುವ ಸಲಹೆಗಳನ್ನು ಒಟ್ಟುಗೂಡಿಸಲು ಶೈಕ್ಷಣಿಕ ಸಂಸ್ಥೆಗಳನ್ನೂ ನೋಡಲ್ ಅಧಿಕಾರಿಗಳೊಂದಿಗೆ ಪಾಲುದಾರರನ್ನಾಗಿಸಿಕೊಳ್ಳಲಾಗಿದೆ. ಇವರು ಎಲ್ಲ ಸಲಹೆಗಳನ್ನು ಥೀಮ್ ವಾರು ಒಟ್ಟುಗೂಡಿಸಿ, ಅವುಗಳನ್ನು ಪ್ರಕಟಿಸಬೇಕು. ಅಲ್ಲದೆ, ವಿಚಾರ ಸಂಕಿರಣಗಳನ್ನು ನಡೆಸಿ ಮಾಹಿತಿಗಳನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ‘ಬ್ಯಾಂಡ್ ಬೆಂಗಳೂರು’ ಥೀಮ್ ಗಳನ್ನು ನಿಗದಿಪಡಿಸಿ, ಬಿಬಿಎಂಪಿ, ಬಿಎಂಟಿಸಿ, ಬಿಡಬ್ಲ್ಯುಎಸ್ ಎಸ್ ಬಿ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದಾರೆ. ಶೈಕ್ಷಣಿಕ ಸಂಸ್ಥೆಗಳನ್ನೂ ಗುರುತಿಸಿ, ಜುಲೈ 14ರಂದು ಸುತ್ತೋಲೆ ಹೊರಡಿಸಿದ್ದಾರೆ.
www.brandbengluru. karnataka. gov. in pre ನಾಗರಿಕರು, ಸಂಘ-ಸಂಸ್ಥೆಗಳು ಜುಲೈ 20ರವರೆಗೆ ಸಲಹೆಗಳನ್ನು ಸಲ್ಲಿಸಬಹುದು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


