ತುಮಕೂರು: ಭೂಮಿ ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಹಮ್ಮಿ ಕೊಂಡಿದ್ದ ಸಾಂಕೇತಿಕ ಪ್ರತಿಭಟನೆ ಯಶಸ್ವಿಯಾಯಿತು.
ಈ ವೇಳೆ 500ಕ್ಕೂ ಹೆಚ್ಚು ಜಿಲ್ಲೆಯ ಭೂಮಿ ವಸತಿ ರಹಿತರು ಈ ಪ್ರತಿಭಟನೆಗೆ ಭಾಗವಹಿಸಿ ನಗರದ ಟಾನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ತುರ್ತಾಗಿ ಸಮಸ್ಯೆಗಳನ್ನು ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು.








ಈ ಸಂದರ್ಭದಲ್ಲಿ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ರಾಜ್ಯ ಸಂಚಾಲಕರದ ಕುಮಾರ್ ಸಮತಳ ಹಾಗೂ ಬೆಂಗಳೂರಿನ ಮರಿಯಪ್ಪ, ಹೈಕೋರ್ಟ್ ವಕೀಲರಾದ ಉಮಾಪತಿ C, ಮತ್ತು ಸುಧಾ ಕಟ್ವ ಹಾಗೂ ಬೆಂಗಳೂರಿನ ಹಿರಿಯ ಹೋರಾಟಗಾರರದ ನರಸಿಂಹ ಮೂರ್ತಿ, ಮಹಿಳಾ ಹೋರಾಟಗಾರ್ತಿ ಲೀಲಾವತಿ ಹಾಗೂ ತುಮಕೂರಿನ ಸಮಾನಮನಸ್ಕ ವಕೀರಾದ M.S. ಗಣೇಶ್, ಶಿವಕುಮಾರ್ ಮೇಸ್ಟ್ರುಮನೆ, ಪದ್ಮನಾಭ, ಶೇಖರ್, ಚಿನ್ಮಯ್, ಮೋಹನ್, ಶಿವಕುಮಾರ್, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಭದ್ರೆ ಗೌಡ್ರು, ಸಮಿತಿಯ ಸರಸ್ವತಿಪುರಂನ ಮಂಜುನಾಥ್, ಮುನಿರಾಜ್, ಬೆಳಧರ ರಫೀಕ್ ಪಾಷ, ಮೂರ್ತಿ ಪವಿತ್ರ, ಜಬೀನ್ ತಾಜ್, ಯಶೋಧ, ನಾಗರತ್ನ, ಇತರರು ಹಾಜರಿದ್ದರು.
ವಿಡಿಯೋ ನೋಡಿ:
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA



