ಯುಪಿಎ ಹಾಗೂ ಅವುಗಳ ಮಿತ್ರ ಪಕ್ಷಗಳ ಮಹಾಘಟಬಂಧನ್ ಸಭೆಗೆ ಈಗಾಗಲೇ ಬೆಂಗಳೂರು ಸಿದ್ಧವಾಗಿದ್ದು, ಇಂದು ಬೆಳಿಗ್ಗೆ 11 ಘಂಟೆಗೆ ಖಾಸಗಿ ಹೊಟೇಲ್ ನಲ್ಲಿ ಸಭೆ ಆರಂಭವಾಗಲಿದೆ.
ಈ ನಿಟ್ಟಿನಲ್ಲಿ ದೇಶದ ವಿವಿಧ ರಾಜ್ಯಗಳ ನಾಯಕರುಗಳನ್ನು ಸ್ವಾಗತಿಸಲು ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿದ್ದು, ಇತ್ತ ಬೆಂಗಳೂರಿಗೆ ಆಗಮಿಸಿರುವ ನಿತೀಶ್ ಕುಮಾರ್ ವಿರುದ್ಧ ಕೆಲ ಕಿಡಿಗೇಡಿಗಳು ಬ್ಯಾನರ್ ಗಳನ್ನು ಆಳವಡಿಸಿದ್ದಾರೆ.
ಬ್ರಿಡ್ಜ್ ಗಳನ್ನೇ ಸರಿಯಾಗಿ ನಿರ್ಮಿಸಲು ಸಾಧ್ಯವಾಗದ ಮುಖ್ಯಮಂತ್ರಿ ಈಗ ಪ್ರಧಾನಿ ಹುದ್ದೆಯ ರೇಸ್ ನಲ್ಲಿ ಬಂದಿದ್ದಾರೆ ಎಂದು ಅವಹೇಳನ ಮಾಡುವಂತಹ ಪೋಸ್ಟರ್ ಗಳನ್ನು ರಾತ್ರೋರಾತ್ರಿ ಆಳವಡಿಕೆ ಮಾಡಿದ್ದು, ಬೆಂಗಳೂರಿನ ಕಾವೇರಿ ಜಂಕ್ಷನ್ ನಿಂದ ತಾಜ್ ವೆಸ್ಟೆಂಡ್ ಹೋಟೆಲ್ ಹಾಗೂ ಚಾಲುಕ್ಯ ಸರ್ಕಲ್ ನಲ್ಲಿ ಪೋಸ್ಟರ್ ಆಳವಡಿಕೆ ಮಾಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


