ರಾಜ್ಯದಲ್ಲಿನ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಇನ್ನು ಮೊಬೈಲ್ ನಿಷಿದ್ಧ ಎಂಬ ಆದೇಶವನ್ನು ಸರ್ಕಾರ ಹೊರಡಿಸಿದೆ.
ಈಗಾಗಲೇ ದೇವಾಲಯಕ್ಕೆ ಬರುವ ಭಕ್ತರು ಮೊಬೈಲ್ ಗಳನ್ನು ದೇವಾಲಯದ ಪ್ರಾಂಗಣಕ್ಕೆ ತಂದು, ಇತರೆ ಭಕ್ತಾಧಿಗಳಿಗೂ ತೊಂದರೆ ಉಂಟು ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ, ದೇವಾಲಯದಲ್ಲಿ ಭಕ್ತಿಗಿಂತ ಹೆಚ್ಚು ಮೊಬೈಲ್ ಗಳ ರಿಂಗ್ ಗಳೇ ಕೇಳುತ್ತಿರುವ ಕಾರಣ, ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ದೇವಾಲಯಗಳಲ್ಲಿ ಮೊಬೈಲ್ ನಿಷಿದ್ಧ ಎಂಬ ಆದೇಶ ಹೊರಡಿಸಿದೆ.
ಇನ್ನು ಆದೇಶದಲ್ಲಿ ಇರುವ ವಿಚಾರವಾದ್ರೂ ಏನು? ಎಂಬುದನ್ನು ನೋಡುವುದಾದ್ರೆ, ದೇವಾಲಯಗಳಲ್ಲಿ ಮೊಬೈಲ್ ಗಳು ಹೆಚ್ಚು ಸದ್ದು ಮಾಡುತ್ತಿರುವ ಕಾರಣ, ಯಾವುದೇ ಭಕ್ತಾಧಿಗಳು ದೇವಾಲಯ ಪ್ರವೇಶ ಮಾಡಿದ್ರೂ, ಅವರು ತಮ್ಮ ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿರಬೇಕು. ಇಲ್ಲವಾದ್ರೆ, ದೇವಾಲಯಕ್ಕೆ ಮೊಬೈಲ್ ಗಳನ್ನು ತರಬಾರದು. ಇದು ಕೇವಲ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಕ್ಕೆ ಮಾತ್ರ ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


