ತುರುವೇಕೆರೆ: ತಾಲೂಕಿನ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆ ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಎರಡನೇ ಅವಧಿಯ ಚುನಾವಣೆಯಲ್ಲಿ ಮೊದಲನೇ ಅವಧಿಯಲ್ಲಿಯೂ ಕೂಡ ಮೊದಲಿಗರಾಗಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಇಂದಿರಾ ಕೃಷ್ಣಸ್ವಾಮಿಯವರು, ಎರಡನೆಯ ಅವಧಿಯ ಚುನಾವಣೆಯಲ್ಲಿಯೂ ಕೂಡ ಮೊದಲಿಗರಾಗಿ ಸ್ಥಾನಕ್ಕೆ ಆಯ್ಕೆಯಾಗಿದ್ದು, ನೂತನವಾಗಿ ಉಪಾಧ್ಯಕ್ಷರಾಗಿ ಮಂಜುನಾಥ್ (ತೂಬಿನಕಟ್ಟೆ)ಆಯ್ಕೆಯಾಗಿದ್ದಾರೆ.
ಇನ್ನೂ 16 ಸದಸ್ಯ ಬಲವುಳ್ಳ ಈ ಪಂಚಾಯಿತಿಯಲ್ಲಿ, ಇಂದು ನಡೆದ ಎರಡನೆಯ ಅವಧಿ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಇಂದಿರ ಕೃಷ್ಣಸ್ವಾಮಿ, ಮತ್ತು ಗೀತಾ ಅರುಣ್, ಶಶಿಕಲಾ ಎಂಬುವರು ನಾಮಪತ್ರ ಸಲ್ಲಿಸಿ, ಕೊನೆ ಕ್ಷಣದಲ್ಲಿ ಶಶಿಕಲಾ ಅವರು ನಾಮಪತ್ರ ವಾಪಸ್ ಪಡೆದಿದ್ದರು, ಇನ್ನುಳಿದ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೀತಾ ಅರುಣಾ ಅವರು (6) ಮತಗಳನ್ನು ಪಡೆದು ಪರಾಭವ ಗೊಂಡರೆ ಇಂದಿರಾ ಕೃಷ್ಣಸ್ವಾಮಿ ಅವರು (9 )ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ, ಒಟ್ಟು ಹದಿನಾರು ಮತಗಳನ್ನು ಹೊಂದಿರುವ ಈ ಚುನಾವಣೆಯಲ್ಲಿ ಒಂದು ಮತ ತಿರಸ್ಕೃತ ಗೊಂಡಿರುತ್ತದೆ.
ಇನ್ನು ಉಪಾಧ್ಯಕ್ಷರ ಸ್ಥಾನಕ್ಕೆ ಮಂಜುನಾಥ್ ಮತ್ತು ಬಾಲಾಜಿ ಎಂಬುವರು ನಾಮಪತ್ರ ಸಲ್ಲಿಸಿದ್ದು , ಈ ಇಬ್ಬರು ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಿ ಅದರಲ್ಲಿ ಬಾಲಾಜಿ (6) ಮತಗಳನ್ನು ಪಡೆದು ಪರಾಭಾವಗೊಂಡು ಮಂಜುನಾಥ್ ಅವರು (9) ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಚುನಾವಣಾ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಚರಣ್ ಸಿಂಗ್ ಚೌಹಾಣ್ ಅವರು, ಚುನಾವಣೆ ಪ್ರಕ್ರಿಯೆ ಮುಗಿಸಿ ಒಟ್ಟು ಸದಸ್ಯರ ಬಲ 16 ಇದ್ದು ಇದರಲ್ಲಿ ಒಂದು ಮತ ಅಸಿಂದು ವಾಗಿದೆ, ಇನ್ನುಳಿದ ಮತಗಳು ಚಲಾವಣೆಯಾಗಿ ಅಧ್ಯಕ್ಷರಾಗಿ ಇಂದಿರ ಕೃಷ್ಣ ಸ್ವಾಮಿ, ಉಪಾಧ್ಯಕ್ಷರಾಗಿ ಮಂಜುನಾಥ್ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಭಿಲಾಶ್, ಪಂಚಾಯಿತಿ ಕರ ವಸೂಲಿಗಾರ ರಾಜಣ್ಣ, ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮಿ, ಹಾಗೂ ಪಂಚಾಯಿತಿ ಸಿಬ್ಬಂದಿಗಳು, ಆರಕ್ಷಕ ಸಿಬ್ಬಂದಿಗಳು, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


