ಸಭಾಧ್ಯಕ್ಷರು ಸದಸ್ಯರನ್ನು ಅಮಾನತು ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪ್ರತಿ ನೀಡಿದ್ದಾರೆ. ಸಭಾಧ್ಯಕ್ಷರ ಮುಖಕ್ಕೆ ಕಾಗದ ಹರಿದು ಎಸೆಯಬಹುದೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಸಭಾಧ್ಯಕ್ಷರು ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಕೈಗೊಂಬೆ ಹೇಗಾಗುತ್ತಾರೆ? ಇವರು ಹೇಳಿದಂತೆ ಕೇಳದಿದ್ದರೆ ಸರ್ಕಾರದ ಕೈಗೊಂಬೆ, ಇಲ್ಲದಿದ್ದರೆ ಇಲ್ಲವೇ? ಎಂದ ಮುಖ್ಯಮಂತ್ರಿಗಳು ‘ನಾನು ವಿಧಾನಸಭೆಯಲ್ಲಿ ಕಳೆದ 40 ವರ್ಷಗಳಿಂದ ಇದ್ದೇನೆ, ಸಭಾಧ್ಯಕ್ಷರ ಬಗ್ಗೆ ಅವಮಾನಕಾರಿಯಾಗಿ, ಅವಹೇಳಕಾರಿಯಾಗಿ ಮಾತನಾಡಿಲ್ಲ. ಕಾಗದವನ್ನು ಹರಿದು ಉಪ ಸಭಾಧ್ಯಕ್ಷರ ಮುಖಕ್ಕೆ ಎಸೆಯುವುದು ಗೂಂಡಾಗಳ ರೀತಿಯಲ್ಲಿ ವರ್ತನೆ ಮಾಡುವುದು ಅನಾಗರಿಕ ಸಂಸ್ಕೃತಿಯಲ್ಲವೇ? ಪ್ರಜಾಪ್ರಭುತ್ವದಲ್ಲಿ, ಸಂಸದೀಯ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆಯೇ? ಜನರ ಸಮಸ್ಯೆ ಚರ್ಚೆ ಮಾಡಿ ಪರಿಹಾರ ಕಂಡುಕೊಂಡು ಬರಬೇಕು. ಅದನ್ನು ಬಿಟ್ಟು ಗೂಂಡಾಗಳ ರೀತಿ ವರ್ತಿಸುವುದು ತಪ್ಪು. ಪ್ರತಿಭಟನೆ ಮಾಡಿದರೆ ತಕರಾರಿಲ್ಲ. ಗಾಜು ಒಡೆಯುವುದು ಮುಂತಾದ ಕೆಲಸಗಳನ್ನು ಮಾಡಬಾರದು’ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


