ರಾಜ್ಯ ವಿಧಾನಸಭೆಯ ಸದನದಲ್ಲಿ ನಡೆದ ಘಟನೆಯ ಬಗ್ಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ. ಸದನ ಮುಕ್ತಾಯದ ಬಳಿಕ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ, ವಿಪಕ್ಷದವರಿಗೆ ಜವಾಬ್ದಾರಿ ಇಲ್ಲ ಅನ್ನುವುದನ್ನು ಹೇಳುತ್ತೇನೆ.
ನಿನ್ನೆ ಪ್ರತಿಪಕ್ಷದವರೆಲ್ಲ ಬಂದಿದ್ದರು. ಹಾಲಿ, ಮಾಜಿ ಎಲ್ಲರೂ ಇದ್ದರು. ಅವರಿಗೆ ಪ್ರೋಟೋಕಾಲ್ ಪ್ರಕಾರ ಸೆಕ್ಯೂರಿಟಿ ನೀಡಿದ್ದೆವು. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬರುತ್ತಿದ್ದರು. ಅವರಿಗೆ ಪ್ರೋಟೋಕಾಲ್ ಪ್ರಕಾರ ಗೌರವ ಕೊಡುತ್ತಿದ್ದರು. ಇವತ್ತು ಬಿಜೆಪಿ ಎಡಬಿಡಂಗಿತನ ತೋರಿದ್ದಾರೆ. ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಬಿಜೆಪಿಯವರು. ವಿಧಾನಸಭೆಯ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ.
ಬಿಜೆಪಿಯವರು ಎಡಬಿಡಂಗಿಗಳು, ಹೊಸ ಸಂಸತ್ ಉದ್ಘಾಟನೆಯಾಯಿತು. ಆಗ ಪುರೋಹಿತರನ್ನ ಅಲ್ಲಿಗೆ ಕರೆದೊಯ್ದಿದ್ದರು. ಸ್ಪೆಷಲ್ ಫೈಟ್ ನಲ್ಲಿ ಕರೆದೊಯ್ದು ಉಪಚಾರ ಮಾಡಿದ್ದರು. ಕುಮಾರಸ್ವಾಮಿ ಪ್ರಮಾಣ ವಚನ ಮಾಡಿದರು. ಆಗ ಯಾರೆಲ್ಲ ಇಲ್ಲಿಗೆ ಬಂದಿದ್ದರಲ್ಲ, ಆಗ ಏಕೆ ಯಾರೂ ಕೇಳಲಿಲ್ಲ?
ಅತಿಥಿಗಳಿಗೆ ಗೌರವ ಕೊಡುವುದು ಇವರಿಗೆ ಬರಲ್ಲ. ಜನ ಚುನಾವಣೆಯಲ್ಲಿ ಮಂಗಳಾರತಿ ಎತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಮಂಗಳಾರತಿ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


