ಹುಕ್ಕೇರಿ: ಪಂಚಾಯತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ನೆರಲಿ ಗ್ರಾಮ ಪಂಪಂಚಾಯತಿನ ನೂತನ ಅಧ್ಯಕ್ಷರಾಗಿ 3ನೇ ವಾನ ತಾತ್ಯಾಸಾಹೇಬ್ (ನೀಲೇಶ) ಜಾದವ್, ಉಪಾಧ್ಯಕ್ಷರಾಗಿ 5ನೇ ವಾರ್ಡನ ವಿಮಲಾ ಕೆಂಪಣ್ಣ ಕಾಂಬಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 16 ಸದಸ್ಯರ ಬಲ ಹೊಂದಿದ ಈ ಗ್ರಾಪಂನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪಂಚಾಯತಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಖಂಡರಾದ ಇಲಿಯಾಸ್ ಇನಾಮದಾರ್, ಮಧುಕರ್ ಖೋತ, ಅನಿಲ್ ಪಾಟೀಲ್, ಶಂಕರ ಸಂಕಪಾಳ, ರಾಜಶೇಖರ್ ಹಂದಿಗೂಡಮಠ, ರವೀಂದ್ರ ಪಾಟೀಲ್, ಕಲಗೌಡ್ ಪಾಟೀಲ್, ಶಿವಲಿಂಗ ಹುಕ್ಕೇರಿ, ವಿರುಪಾಕ್ಷಿ ಹೊಸಮನಿ, ಮಾರುತಿ ತಳವಾರ್, ಶಕೀಲ್ ಮುಲ್ಲಾ ಮಾರ್ಗದರ್ಶನದಲ್ಲಿ ಈ ಅವಿರೋಧ ಆಯ್ಕೆ ನಡೆಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


