ವಿಶ್ವದ 38 ರಾಷ್ಟ್ರಗಳಲ್ಲಿ ಆಧುನಿಕ ತಂತ್ರಜ್ಞಾನದ ಆವಿಷ್ಕಾರ ಸೃಜಿಸಿ, 11 ಉತ್ಪಾದನಾ ಘಟಕಗಳನ್ನು ಹೊಂದಿರುವ ಹಿಟಾಚಿ ರೇಲ್ ಎಸ್. ಟಿ. ಎಸ್ ಪೈವೇಟ್ ಲಿಮಿಟೆಡ್ ಕಚೇರಿಯನ್ನು ಇಂದು ಬೆಂಗಳೂರಿನ ದೊಮ್ಮಲೂರಿನಲ್ಲಿ ನಾಡಿನ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಉದ್ಘಾಟಿಸಿ ಶುಭ ಕೋರಿ ಮಾತನಾಡಿದರು.
ಭಾರತದಲ್ಲಿ “ಸ್ಮಾರ್ಟ್ ಮೊಬಿಲಿಟಿ” ಯನ್ನು ವೇಗಗೊಳಿಸಿ “ಸುರಕ್ಷಿತ ಮತ್‌ಆತು ರಾಮದಾಯಕ” ಹಾಗೂ “ಪರಿಸರ ಸ್ನೇಹಿ” ಸಾರಿಗೆ ಪರಿಹಾರಗಳನ್ನು ಒದಗಿಸುವ ಸಾಮಾಜಿಕ ನಾವೀನ್ಯತೆ ವ್ಯವಹಾರದ ಮೂಲಕ ಹಿಟಾಚಿ ರೇಲ್ ಕಂಪನಿಯು, ಉದ್ಯಮ ಶೀಲತೆಯ ಬೆಳವಣಿಗೆಗೆ ಬದ್ಧವಾಗಿರುವ ಕುರಿತು ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಮಾಹಿತಿ ಪಡೆದುಕೊಂಡರು.
ಭಾರತದ ಕ್ಷಿಪ್ರ ಆರ್ಥಿಕ ಬೆಳವಣಿಗೆ ಮತ್ತು ಜಾಗತೀಕ ಕೈಗಾರಿಕಾ ವಲಯದ ಉತ್ಪಾದನಾ ಗುಣಮಟ್ಟಕ್ಕೆ ಹಿಟಾಚಿ ರೇಲ್ ಎಸ್. ಟಿ. ಎಸ್ ಪ್ರೈವೇಟ್ ಲಿಮಿಟೆಡ್ ವಿಶಿಷ್ಟ ಕೊಡುಗೆ ನೀಡಲಿ ಎಂದು ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಆಶಯ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


