ಚೊಚ್ಚಲ ಆವೃತ್ತಿಯ ಯಶಸ್ಸಿನ ಬಳಿಕ ಬಹುನಿರೀಕ್ಷಿತ ದ್ವಿತೀಯ ಆವೃತ್ತಿಯ ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಟೂರ್ನಿಗೆ ತಯಾರಿ ಆರಂಭವಾಗಿದೆ. ಆಗಸ್ಟ್ 13ರಿಂದ 29ರವರೆಗೂ ಟೂರ್ನಿಗೆ ದಿನಾಂಕ ನಿಗದಿಯಾಗಿದ್ದು, ಇಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಆಟಗಾರರ ಹರಾಜು ಪ್ರಕ್ರಿಯೆಗೆ ನಾಲ್ಕು ಕೆಟಗರಿಗಳನ್ನು ನಿಗದಿಸಲಾಗಿದ್ದು, ಪ್ರತಿ ಫ್ರಾಂಚೈಸಿಗೆ ತನ್ನ ಆಟಗಾರರನ್ನು ಖರೀದಿಸಲು 50 ಲಕ್ಷ ರೂ ಗರಿಷ್ಠ ಮಿತಿ ನೀಡಲಾಗಿದೆ. ‘ಎ’ ಕೆಟಗರಿಯಲ್ಲಿ ಭಾರತ ರಾಷ್ಟ್ರೀಯ ತಂಡ ಹಾಗೂ ಐಪಿಎಲ್ ತಂಡಗಳನ್ನು ಪ್ರತಿನಿಧಿಸಿರುವ ಆಟಗಾರರ ಹರಾಜು ನಡೆಯಲಿದ್ದು, ‘ಬಿ’ ಕೆಟಗರಿಯಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಸೈಯ್ಯದ್ ಮುಸ್ತಾಕ್ ಅಲಿ ಟ್ರೋಫಿಯಂತಹ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿರುವ ಹಿರಿಯ ಆಟಗಾರರ ಹರಾಜು ನಡೆಯಲಿದೆ. ಇನ್ನು ‘ಸಿ’ ಕೆಟಗರಿಯಲ್ಲಿ ಬಿಸಿಸಿಐ ಅನುಮೋದಿತ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರ ಹರಾಜು ನಡೆದರೆ, ‘ಡಿ’ ಕೆಟಗರಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ. ಎಸ್. ಸಿ. ಎ)ಯಲ್ಲಿ ನೋಂದಾಯಿತ ಆಟಗಾರರ ಹರಾಜು ನಡೆಯಲಿದೆ.
ಪ್ರತಿ ಫ್ರಾಂಚೈಸಿಯು ಕನಿಷ್ಠ 16 ಆಟಗಾರರನ್ನು ಹೊಂದಿರಬೇಕು. ಮತ್ತು ಆಯಾ ವಲಯದ ಇಬ್ಬರು ಕ್ಯಾಚ್‌ಮೆಂಟ್ ಏರಿಯಾ ಆಟಗಾರರ ಜೊತೆಗೆ 18ಕ್ಕಿಂತ ಹೆಚ್ಚು ಆಟಗಾರರನ್ನು ಹೊಂದಿರಬಾರದು ಎಂಬ ನಿಯಮವಿರಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


