ರಾಯಚೂರು: ತಾಲೂಕಿನ ವಡ್ಲೂರು ಗ್ರಾಮದಲ್ಲಿ ಮಗನಿಂದಲೇ ತಂದೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನಲ್ಲಿ ಹೂತಿಟ್ಟಿದ್ದ ಶವವನ್ನು 13 ದಿನಗಳ ಬಳಿಕ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಜಿಟಿ ಜಿಟಿ ಮಳೆಯಲ್ಲೇ ರಾಯಚೂರು ಎಸಿ ಮೆಹಬೂಬಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಜುಲೈ 7 ರಂದು ವಡ್ಲೂರು ಗ್ರಾಮದಲ್ಲಿ 70 ವರ್ಷದ ಶಿವನಪ್ಪ ಕೊಲೆಯಾಗಿದ್ದು, ಪ್ರಕರಣದ ಆರೋಪಿ ಈರಣ್ಣ ಜುಲೈ 19 ರಂದು ಪೊಲೀಸರಿಗೆ ಶರಣಾದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಭಾರತ ಮಾಲಾ ಯೋಜನೆ ಹೈವೆಗೆ ಜಮೀನು ಹೋಗಿದ್ದು, ಭೂಸ್ವಾಧೀನ ಪರಿಹಾರ ಹಣಕ್ಕಾಗಿ ತಂದೆ-ಮಗನ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
ತಂದೆಯ ಕೊಲೆ ಬಳಿಕ ವಡ್ಲೂರು ಗ್ರಾಮದ ಹೈವೆ ಪಕ್ಕದಲ್ಲಿ ಈರಣ್ಣ ತಾಯಿ ರಂಗಮ್ಮ ಜೊತೆಗೂಡಿ ಶವವನ್ನು ಹೂತಿಟ್ಟಿದ್ದ. ಬಳಿಕ ತಂದೆ ಕಾಣೆಯಾಗಿದ್ದಾರೆ ಎಂದು ಗ್ರಾಮದಲ್ಲಿ ಹೇಳಿಕೊಂಡು ಬಂದಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ತಂದೆ ಕಾಣೆಯಾಗಿದ್ದಾರೆ ಎಂದು ದೂರು ಕೊಡಲು ಬಂದರೂ ಧೈರ್ಯ ಸಾಲದೆ ವಾಪಸ್ ತೆರಳಿದ್ದ.
ಆದರೆ ಈರಣ್ಣನ ವರ್ತನೆ ಮೇಲೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಅನುಮಾನಗೊಂಡಿದ್ದರು. ಇದಕ್ಕೆ ಹೆದರಿ ಆರೋಪಿ ಬುಧವಾರ ಪೊಲೀಸರಿಗೆ ಶರಣಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಮಳೆಯಲ್ಲೇ ಶವ ಹೊರತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮೃತನ ಕುಟುಂಬಸ್ಥರು ಅದೇ ಹೊಲದಲ್ಲಿ ಶಿವನಪ್ಪನ ಅಂತ್ಯಸಂಸ್ಕಾರ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


