ತುರುವೇಕೆರೆ: ಪಟ್ಟಣದಲ್ಲಿ ರೈತರ ಬೃಹತ್ ಹೋರಾಟವನ್ನು ಎಲ್ಲಾ ಸಂಘಟನೆಗಳೊಂದಿಗೆ ಆಗಸ್ಟ್ 3 ರಂದು ತುರುವೇಕೆರೆ ಬಂದ್ ಹಮ್ಮಿಕೊಂಡಿದ್ದೇವೆ ಎಂದು ತಾಳಕೆರೆ ನಾಗೇಂದ್ರ ತಿಳಿಸಿದ್ದಾರೆ .
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷರಾದ ತಾಳ್ಕೆರೆ ನಾಗೇಂದ್ರ ಅವರು ಮಾತನಾಡಿ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ ಇದು ಅನ್ಯಾಯದ ಪರಮಾವಧಿ ಅಧಿಕಾರಿಗಳಿಗೆ ಹಣ ನೀಡಿದರೆ ಎಂತಹ ಕೊಬ್ಬರಿ ಬೇಕಾದರೂ ಹಾಕಿಸಿಕೊಳ್ಳುತ್ತಾರೆ ಮಾರುಕಟ್ಟೆಯಲ್ಲಿರುವ ಕೊಬ್ಬರಿಯನ್ನು ಖರೀದಿ ಮಾಡುತ್ತಾರೆ ಎಂದು ಆರೋಪಿಸಿ.
ರೈತರ ಕೊಬ್ಬರಿಯನ್ನು ಸರಿಯಾಗಿ ಖರೀದಿ ಮಾಡಿಲ್ಲ ಇನ್ನೂ ಮಾರುವಂತ ಕೊಬ್ಬರಿ ಶೇಕಡ 60ರಷ್ಟು ರೈತರ ಬಳಿಯೇ ಇದೆ. ಇವರು ಒಂದು ತಿಂಗಳಿನಿಂದ ಬೇಕು ಬೇಡವೋ ಕರಿಸಿ ಖರೀದಿಸಿದ್ದು ಕಳೆದ ಒಂದು ವಾರದಿಂದ ಬಾಗಿಲನ್ನೇ ಮುಚ್ಚಿ, ನಿನ್ನೆ ನಮ್ಮ ಸಂಘಟನೆಯ ಗೌರವಾಧ್ಯಕ್ಷರು ಕೊಬ್ಬರಿಯನ್ನು ಆರಿಸಿಕೊಂಡು ತಂದಿದ್ದಾರೆ. ಆರಿಸಿಕೊಂಡು ತಂದಿರುವ ಕೊಬ್ಬರಿಯನ್ನು ರಿಜೆಕ್ಟ್ ಮಾಡಿದ್ದಾರೆ. ಇದೇ ತರಹ ಸಾವಿರಾರು ರೈತರಿಗೆ ಅನ್ಯಾಯವಾಗುತ್ತಿದೆ ಆದ್ದರಿಂದ ದೊಡ್ಡ ಮಟ್ಟದ ಹೋರಾಟ ಮಾಡಬೇಕಿದೆ. ಈ ಹೋರಾಟಕ್ಕೆ ತಾಲೂಕಿನ ಎಲ್ಲಾ ರೈತರು ಕೈಜೋಡಿಸಬೇಕು.
ಜನಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ನಾವು ಸಜ್ಜಾಗಿದ್ದೇವೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಎಲ್ಲಾ ಪ್ರಗತಿಪರ ಸಂಘಟನೆಗಳು ಈ ಹೋರಾಟಕ್ಕೆ ಇಳಿಯುತ್ತವೆ. ದಯಮಾಡಿ ಎಲ್ಲರೂ ಸಹಕಾರ ನೀಡಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ ಎಂದರು. ದಿನಾಂಕ 3. 8. 2023ನೇ ದಿನದಂದು ಸಮಯ 11 ರಿಂದ 2 ಗಂಟೆಯವರೆಗೆ ತುರುವೇಕೆರೆ ಪಟ್ಟಣವನ್ನು ಬಂದು ಮಾಡುತ್ತಿದ್ದು ದಯವಿಟ್ಟು ಎಲ್ಲರೂ ಸಹಕರಿಸಿ. ನಮ್ಮ ಹೋರಾಟ ಎಪಿಎಂಸಿ ಕಚೇರಿಯಿಂದ ಪ್ರಾರಂಭವಾಗುತ್ತದೆ. ರೈತರನ್ನು ಕರೆದುಕೊಂಡು ಅಂಗಡಿ ಮುಂಗಟ್ಟಗಳನ್ನು ಬಂದು ಮಾಡಿಸಿ ತಹಸಿಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಅಂಗಡಿ ಮುಂಗಟ್ಟುಗಳ ಮಾಲೀಕರುಗಳು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ಯಶಸ್ವಿಯಾಗಿಸಿ ರೈತರ ಹೋರಾಟಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಮಾಧ್ಯಮದ ಮುಖಾಂತರ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜೇಶ್, ಶಿವಾನಂದ್, ಬಸವರಾಜು ಗೌರವಾಧ್ಯಕ್ಷರು ,ಶಂಕರ್ ಲಿಂಗಪ್ಪ ಸಂಚಾಲಕರು ,ಗಂಗಾಧರ ಉಪಾಧ್ಯಕ್ಷರು ,ಉಮೇಶ್, ರವಿ ದಂಡಿನಶಿವರ ,ವಿಜಯ್ ಕುಮಾರ್ ಪ್ರಧಾನ ಕಾರ್ಯದರ್ಶಿ, ಕೈಲಾಸ್ ಖಜಾಂಚಿ, ಶ್ರೀಧರ್ ಕೋಡಿಹಳ್ಳಿ ,ರಜತ್, ದಿನೇಶ್ ಕಲ್ಕೆರೆ ,ಹೊಣಕೆರೆ ಸೋಮಣ್ಣ ,ಕೀರ್ತಿ ಹಳೆ ಸಂಪಿಗೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


