ಬೆಂಗಳೂರು ಮೂಲದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಎರಡು ದಿನಗಳ ಹಿಂದೆ ಬೆಂಗಳೂರು ಮೂಲದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ನ ಕಾರ್ಯ ನಿರ್ವಹಣೆಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ನಿನ್ನೆಯಿಂದಲೇ ಜಾರಿಗೆ ಬರುವ ಕೆಲ ನಿರ್ಬಂಧಗಳನ್ನು ಹೇರಿದೆ.
ಯಾವುದೇ ಹೂಡಿಕೆಗೆ ನಿರ್ಬಂಧ, ಸಾಲ ಎರವಲು ಪಡೆಯುವಂತಿಲ್ಲ, ಹೊಸದಾಗಿ ಠೇವಣಿ ಸ್ವೀಕರಿಸುವಂತಿಲ್ಲ, ಯಾವುದೇ ದೊಡ್ಡ ಮೊತ್ತದ ಪಾವತಿ ಮಾಡುವಂತಿಲ್ಲ. ಆರ್‌ಬಿಐ ಅನುಮತಿ ಇಲ್ಲದೇ ಬ್ಯಾಂಕ್ ನ ಆಸ್ತಿ ಮಾರಾಟ ಮಾಡುವಂತಿಲ್ಲ. ಪರಭಾರೆಯನ್ನು ಮಾಡುವಂತಿಲ್ಲ. ಒಪ್ಪಂದಗಳನ್ನು ಮಾಡಿಕೊಳ್ಳುವಂತಿಲ್ಲ. ಇನ್ನು ಗ್ರಾಹಕರು ತಮ್ಮ ಖಾತೆಯಿಂದ 50 ಸಾವಿರಕ್ಕಿಂತ ಹೆಚ್ಚು ಹಣ ಹಿಂಪಡೆಯುವಂತಿಲ್ಲ.
ಹೀಗೆ ಹಲವು ನಿರ್ಬಂಧಗಳನ್ನು ಆರ್‌ಬಿಐ ಹೇರಿದ್ದು, ಬೆಂಗಳೂರು ಮೂಲದ ಮತ್ತೊಂದು ಬ್ಯಾಂಕ್ ಮುಳುಗಿ ಹೋಗುವ ಆತಂಕ ಸೃಷ್ಠಿಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


