ಬೆಂಗಳೂರು ದಕ್ಷಿಣ ವಲಯ – 1ರ ಹನುಮಂತನಗರದ ಸುಂಕೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಐನೂರಕ್ಕೂ ಹೆಚ್ಚು ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆಯನ್ನು ಗೋ ಸಂರಕ್ಷಕ, ಸಮಾಜ ಸೇವಕರಾದ ಮಹೇಂದ್ರ ಮುನ್ನೋತ್ ಅವರು ಮಾಡಿದರು.
ನಂತರ ಅವರು ಮಾತನಾಡಿ ಉಳ್ಳವರು ತಮ್ಮ ಗಳಿಕೆಯಲ್ಲಿ ಇಂತಿಷ್ಟು ಎಂದು ಸ್ವಲ್ಪ ಹಣವನ್ನು ಉಳಿಸಿ ಅದನ್ನು ಸಮಾಜದ ಅವಶ್ಯಕತೆ ಇರುವವರಿಗೆ ನೀಡಿ ಜನ್ಮ ಸಾರ್ಥಕ ಪಡಿಸಿಕೊಳ್ಳಿ ಎಂದರು. ಪ್ರತಿ ವರ್ಷ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಲಕ್ಷಾಂತರ ನೋಟ್ ಪುಸ್ತಕವನ್ನು ನೀಡುತ್ತು ಬಂದಿದ್ದೇನೆ ಎಂದರು.
ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯೆ ಹಾಗೂ ಗ್ರೇನ್ ಮರ್ಚೆಂಟ್ ಕೋ-ಅಪರೆಟಿವ್ ಬ್ಯಾಂಕ್ ನ ನಿರ್ದೇಶಕಿ ಎನ್. ಮಾಲಿನಿ ಮಾತನಾಡಿ ಸರಕಾರಿ ಶಾಲೆಯ ಮಕ್ಕಳಿಗೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ದಾನಿಗಳು ನೀಡಿ ಆ ಮಕ್ಕಳ ಓದಿಗೆ ನೇರವಾಗುತ್ತಿರುವುದು ಅಭಿನಂದನೀಯವದದು ಎಂದರು, ಎಲ್ಲಾ ದಾನಕ್ಕಿಂತ ಶ್ರೇಷ್ಠವಾದ ದಾನ ವಿದ್ಯಾ ದಾನ. ಅದಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ನಮ್ಮ ಕೋಟಿ ನಮನಗಳು ಎಂದರು.
ಈ ಸಂದರ್ಭದಲ್ಲಿ ಮತ್ತೊಬ್ಬ ನಿರ್ದೇಶಕಿ ನಾಗರತ್ನ, ಎಸ್ ಡಿ ಎಂ ಸಿ ಸದಸ್ಯ ಚಿಟ್ಕಾನ, ಹೈ ಸ್ಕೂಲ್ ಮುಖ್ಯ ಶಿಕ್ಷಕಿ ಭವ್ಯ, ಪ್ರಾಥಮಿಕ ಶಾಲೆ ಹೆಡ್ ಮೇಡಮ್ ವಿಜಯ ಸೇರಿದಂತೆ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


