ತುಮಕೂರು: ಕಳೆದ ಮೂರು ದಿನಗಳಿಂದಲೂ ತುಮಕೂರು ಜಿಲ್ಲೆಯಾದ್ಯಂತ ವಿವಿಧಡೆ ಉತ್ತಮ ಮಳೆ ಆಗುತ್ತಿದ್ದು, ಜಿಟಿ ಜಿಟಿ ಮಳೆಯಿಂದಾಗಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ತುಮಕೂರು ಜಿಲ್ಲೆಯಲ್ಲಿ ದಿನವಿಡೀ ಸುರಿಯುತ್ತಿರುವ ಜಡಿ ಮಳೆಯಿಂದ ಕೆಲವೆಡೆ ಜನ ಜೀವನ ಅಸ್ತವ್ಯಸ್ತ ಉಂಟಾಗಿದೆ.
ಕೆಲ ಕಾಲ ಬಿಡುವು ಕೊಡುವ ಮಳೆರಾಯ ಮತ್ತೆ ಹನಿ ರೂಪದಲ್ಲಿ ಧರೆಗೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೆಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಮಳೆಯಲ್ಲಿ ಕೊಡೆ ಹಿಡಿದು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಬಿಟ್ಟು ಬಿಡದೆ ಸುರಿದ ಮಳೆ ವಿವರ ಪ್ರಕಾರ: ತುಮಕೂರು ತಾಲೂಕಿನ ವ್ಯಾಪ್ತಿಯಲ್ಲಿ 5.2 ಮಿ.ಮೀ . , ಗುಬ್ಬಿ ತಾಲೂಕಿನ 10ಮಿ.ಮೀ. , ಕುಣಿಗಲ್ ತಾಲೂಕಿನಲ್ಲಿ 5 ಮಿ.ಮೀ. , ತಿಪಟೂರು ತಾಲೂಕಿನಲ್ಲಿ 4.3 ಮಿ.ಮೀ. , ಚಿಕ್ಕನಾಯಕನಹಳ್ಳಿ. ತಾಲೂಕಿನ ಭಾಗದಲ್ಲಿ 7.3 ಮಿ.ಮೀ., ತುರುವೆಕೆರೆ 10 ಮಿ.ಮೀ., ಮಧುಗಿರಿ 3.3 ಮಿ.ಮೀ., ಶಿರಾ 5.2 ಮಿ.ಮೀ, ಕೊರಟಗೆರೆ 6.1 ಮಿ.ಮೀ, ಪಾವಗಡ 6.2 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


