ಜುಲೈ 26 ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತೇವೆ. 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಮಡಿದ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮಕ್ಕೆ ಗೌರವ ಸಲ್ಲಿಸಲು ಪ್ರತಿವರ್ಷ ಜುಲೈ 26 ರಂದು ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ.
1999 ರಲ್ಲಿ ಪಾಕಿಸ್ತಾನಿ ಸೈನಿಕರು ಜಮ್ಮು-ಕಾಶ್ಮಿರದಲ್ಲಿ ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ನಮ್ಮ ಬೆಟ್ಟಗಳನ್ನು ವಶಪಡಿಸಿಕೊಂಡಿದ್ದರು. ಇವರ ವಿರುದ್ಧ ಭಾರತೀಯ ಸೈನಿಕರು ವೀರಾವೇಶದಿಂದ ಹೋರಾಡಿ ವಿಜಯಶಾಲಿಯಾದರು. ಈ ಮಿಲಿಟರಿ ಕಾರ್ಯಾಚರಣೆಗೆ “ಕಾರ್ಗಿಲ್ ಯುದ್ಧ” ಎಂದು ಕರೆಯುತ್ತಾರೆ. ಇಡೀ ಕಾರ್ಯಾಚರಣೆಗೆ ಆಪರೇಷನ್ ವಿಜಯ್ ಎಂದು ಹೆಸರಿಸಲಾಗಿದೆ.
2023 ಜುಲೈ 26ರಕ್ಕೆ ಕಾರ್ಗಿಲ್ ಯುದ್ಧ ಸಂಭವಿಸಿ 24 ವರ್ಷವಾಯಿತು. 1999 ರಲ್ಲಿ ಕಾರ್ಗಿಲ್ ಯುದ್ಧವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ಅಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಸೈನಿಕರನ್ನು ಬಗ್ಗು ಬಡಿಯುವ ಮೂಲಕ ‘ಆಪರೇಷನ್ ವಿಜಯ್’ ಅಡಿಯಲ್ಲಿ ಪ್ರಸಿದ್ಧ ‘ಟೈಗರ್ ಹಿಲ್’ ಮತ್ತು ಇತರ ಪ್ರಮುಖ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತು.
ಕಾರ್ಗಿಲ್ ಯುದ್ಧವು 60 ದಿನಗಳಿಗಿಂತ ಹೆಚ್ಚು ಕಾಲ ನಡೆಯಿತು. 527 ಭಾರತೀಯ ಸೈನಿಕರು ಹುತಾತ್ಮರಾದರು. ಕಾರ್ಗಿಲ್ ಯುದ್ಧ ಹೀರೋ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಚಿರಕಾಲ ನೆನಪಿನಲ್ಲಿ ಉಳಿಯುವಂತಹ ವೀರ ಯೋಧ. ಕ್ಯಾಪ್ಟನ್ ವಿಕ್ರಮ ಬಾತ್ರಾ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರ ನೀಡಿ ಗೌರವಿಸಲಾಗಿದೆ.
ಕಾರ್ಗಿಲ್ ಯುದ್ಧದ ಭಾಗವಾದ ಆಪರೇಷನ್ ವಿಜಯ್‌ನ ಕಾರ್ಯಾಚರಣೆಯಲ್ಲಿ ಅಪ್ರತಿಮ ಹೋರಾಟ ಹಾಗೂ ಬಲಿದಾನಗೈದಿರುವ ಭಾರತೀಯ ಶೂಟರ್ ಗಳ ಸ್ಮರಣಾರ್ಥ, ಕಾರ್ಗಿಲ್ ನ ದ್ರಾಸ್ ಸೆಕ್ಟರ್ ನ ಪಾಯಿಂಟ್ 5140 ಬೆಟ್ಟವನ್ನು ಗನ್ ಹಿಲ್ ಎಂದು ಮರುನಾಮಕರಣ ಮಾಡಲಾಗಿದೆ.
ಕಾರ್ಗಿಲ್ ಯುದ್ಧದ ಭಾಗವಾದ ಆಪರೇಷನ್ ವಿಜಯ್ ನ ಕಾರ್ಯಾಚರಣೆಯಲ್ಲಿ ಅಪ್ರತಿಮ ಹೋರಾಟ ಹಾಗೂ ಬಲಿದಾನಗೈದಿರುವ ಭಾರತೀಯ ಶೂಟರ್ ಗಳ ಸ್ಮರಣಾರ್ಥ, ಕಾರ್ಗಿಲ್ ನ ದ್ರಾಸ್ ಸೆಕ್ಟರ್ ನ ಪಾಯಿಂಟ್ 5140 ಬೆಟ್ಟವನ್ನು ಗನ್ ಹಿಲ್ ಎಂದು ಮರುನಾಮಕರಣ ಮಾಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


