ವಧು ಹುಡುಕಿಕೊಡುವ ನೆಪದಲ್ಲಿ ನಗರದ ನಿವಾಸಿಯೊಬ್ಬರಿಂದ 786 ಸಾವಿರ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ದೂರುದಾರ, ತಮ್ಮ ಪುತ್ರನಿಗೆ ವಧು ಹುಡುಕುತ್ತಿದ್ದರು. ಹಲವು ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ವಧು ಬಗ್ಗೆ ವಿಚಾರಿಸುತ್ತಿದ್ದರು. ‘ಬ್ರಾಹ್ಮಣ ವೇದಿಕೆ ಟ್ರಸ್ಟ್’ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ದೂರುದಾರರನ್ನು ಪರಿಚಯ ಮಾಡಿಕೊಂಡಿದ್ದ ಸುಧಾಕರ್ ಅಲಿಯಾಸ್ ವೆಂಕಟಾಚಾರಿ, ವಧು ಹುಡುಕಿಕೊಡುವುದಾಗಿ ಹೇಳಿದ್ದ. ಅದಕ್ಕಾಗಿ ಹಂತ ಹಂತವಾಗಿ 786 ಸಾವಿರ ಪಡೆದಿದ್ದ.’
‘ಹಲವು ತಿಂಗಳಾದರೂ ಆರೋಪಿ, ವಧು ಹುಡುಕಿಲ್ಲ. ಬೇಸತ್ತ ದೂರುದಾರ, ಹಣವನ್ನು ವಾಪಸು ನೀಡುವಂತೆ ಕೋರಿದ್ದರು. ಇದಾದ ನಂತರ, ಆರೋಪಿ ಪರಾರಿಯಾಗಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


