ಬಸನಗುಡಿಯ ‘ನ್ಯಾಷನಲ್ ಕೋ- ಆಪರೇಟಿವ್ ಬ್ಯಾಂಕ್’ನಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಠೇವಣಿದಾರರಿಗೆ ನ್ಯಾಯ ಕಲ್ಪಿಸುವಂತೆ ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರು ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆಯ ಮುಖ್ಯಪೋಷಕ ಶಂಕರ್ ಗುಹಾ ದ್ವಾರಕನಾಥ್ ಒತ್ತಾಯಿಸಿದ್ದಾರೆ.
‘ಬಸವನಗುಡಿ ಐತಿಹಾಸಿಕ ಪ್ರಸಿದ್ಧಿ ಕ್ಷೇತ್ರವಾಗಿತ್ತು. ಆದರೆ, ಇದೀಗ ಬ್ಯಾಂಕ್ ಹಗರಣಗಳಿಂದ ಸುದ್ದಿ ಆಗುತ್ತಿದೆ. ಬಸವನಗುಡಿ ಸಹಕಾರಿ ಬ್ಯಾಂಕ್ ಹಗರಣಗಳ ಸರಮಾಲೆಗೆ ಇದು ಸೇರ್ಪಡೆಯಾಗಿದೆ’ ಎಂದು ಅವರು ಹೇಳಿದ್ದಾರೆ.
‘ಈ ಬ್ಯಾಂಕ್ ನ ಹೊಸ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿ, ಕೆಲವೇ ವರ್ಷಗಳಾಗಿದೆ. ಈ ಹಗರಣದ ಕುರಿತು ಹಳೇ ಆಡಳಿತ ಮಂಡಳಿ ಪದಾಧಿಕಾರಿಗಳು ಉತ್ತರ ನೀಡಬೇಕು. ಬ್ಯಾಂಕ್ ಅನ್ನು ಗ್ರಾಹಕರು ನಂಬಿ ತಾವು ಕಷ್ಟಪಟ್ಟು ಬೆವರು ಸುರಿಸಿ ದುಡಿದ ಹಣ ಠೇವಣಿ ರೂಪದಲ್ಲಿ ಇಟ್ಟಿರುತ್ತಾರೆ. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕಿದ್ದ ಬ್ಯಾಂಕ್‌ಗಳೇ ಹಗರಣಕ್ಕೆ ಒಳಪಡುತ್ತಿರುವುದು ಅತ್ಯಂತ ಆತಂಕಕಾರಿ’ ಎಂದು ತಿಳಿಸಿದ್ದಾರೆ.
‘ಠೇವಣಿದಾರರ ಹಿತದೃಷ್ಟಿಯಿಂದ ಕೇಂದ್ರ, ರಾಜ್ಯ ಸರ್ಕಾರ ಹಗರಣ ನಡೆಸಿರುವ ಬ್ಯಾಂಕ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಶೇಷ ತಂಡವನ್ನು ರಚಿಸಬೇಕು. ದೈನಂದಿನ ವ್ಯವಹಾರಗಳ ಮೇಲೆ ನಿಗಾ ಇರಿಸಬೇಕು’ ಎಂದು ಒತ್ತಾಯಿಸಿದರು.
‘ಬಸವನಗುಡಿಯಲ್ಲಿ ಇನ್ನೆರಡು ಸಹಕಾರಿ ಬ್ಯಾಂಕುಗಳು ಇದೇ ರೀತಿ ಹಗರಣದ ಹಾದಿ ಹಿಡಿಯುವ ಮುನ್ಸೂಚನೆ ಕಾಣಿಸುತ್ತಿದೆ’ ಎಂದು ಗುಹಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


