ಪಾವಗಡ: ಗಡಿ ಭಾಗಗಳಲ್ಲಿ ಕನ್ನಡ ಭಾಷೆ ಕಂಪು ಹೆಚ್ಚಿಸಲು ಸರ್ಕಾರ ಅಗತ್ಯ ಕ್ರಮ ಮತ್ತು ಅಭಿವೃದ್ದಿಗೆ ಒತ್ತು ನೀಡಬೇಕು ಕ.ರ .ವೇ ಪ್ರಧಾನ ಕಾರ್ಯದರ್ಶಿ ಓಂಕಾರ ನಾಯಕ ಸರ್ಕಾರಕ್ಕೆ ಅಗ್ರಹಿಸಿದರು.
ಪಾವಗಡ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ ) ವತಿಯಿಂದ ಇಂದು ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ನಡೆದ 66 ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪಾವಗಡ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ದಿ.ಪುನೀತ್ ರಾಜ್ ಕುಮಾರ್ ರವರಿಗೆ ಮೌನಚಾರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಭಾಷೆ ಮತ್ತು ಇನ್ನಿತರ ಸಮಸ್ಯೆಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು. ಗಡಿ ಭಾಗಗಳಲ್ಲಿ ಅನೇಕ ತೊಂದರೆಗಳು ಅಲ್ಲಿನ ಕನ್ನಡಿಗರು ಅನುಭವಿಸುವ ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ಗೋಚರಿಸುತ್ತಿದೆ ಅದನ್ನು ಸರ್ಕಾರಗಳು ಸರಿ ಪಡಿಸುವ ಮತ್ತು ಅಲ್ಲಿನ ಭಾಷೆ ನೆಲ ಜಲ ಗಾಳಿ ನೀರು ರಕ್ಷಣೆಗೆ ಮುಂದಾಗಬೇಕು ಎಂದರು ಜೊತೆಗೆ ಗಡಿ ನಾಡಿನ ತಾಲೂಕು ಕೇಂದ್ರ ಮತ್ತು ಹೋಬಳಿ ಮಟ್ಟದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಮತ್ತು ಸ್ಥಳೀಯ ಕಂಪನಿ ಮತ್ತು ಇನ್ನಿತರ ಕ್ಷೇತ್ರದಲ್ಲಿ ಕನ್ನಡಿಗನಿಗೆ ಅಧ್ಯತೆ ಮತ್ತು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ದೇಶದ ಅತ್ಯಂತ ದೊಡ್ಡ ಸೋಲಾರ್ ಪಾರ್ಕ್ ಪಾವಗಡ ದಲ್ಲಿ ನಿರ್ಮಿಸಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಆದರೆ ಸ್ಥಳೀಯ ರೈತ ಮತ್ತು ಯುವಕ ಯುವತಿಯರಿಗೆ ಉದ್ಯೋಗ ನೀಡದಿರುವುದು ಜೊತೆಗೆ ನಿರ್ಲಕ್ಷ ತೋರುತ್ತಿರುವುದು ಸರಿಯಲ್ಲ ಕೂಡಲೇ ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳೀಯರಿಗೆ ಹೆಚ್ಚು ಹೆಚ್ಚು ಅವಕಾಶ ನೀಡಿ ತಾಲೂಕಿನ ಅಭಿವೃದ್ಧಿ ಮತ್ತು ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಮುಂದಾಗಬೇಕು ಎಂದರು
ಕನ್ನಡ ಭಾಷೆ ನಮ್ಮ ತಾಯಿ ಭಾಷೆ ನಾಡಿನಲ್ಲಿ ಜನಿಸಿದ ಪ್ರತಿಯೊಬ್ಬ ಕನ್ನಡಿಗನು ಭಾಷೆ ಬಲ ಪಡಿಸಲು ಪಣ ತೊಡಬೇಕು ಜಯಂತಿ ಮತ್ತು ಉತ್ಸವ ಒಂದು ದಿನಕ್ಕೆ ಸೀಮಿತವಾಗಬಾರದು ಅದು ನಿತ್ಯ ನಿರಂತರ ನಮ್ಮ ಮನೆ ನಮ್ಮ ಪರಿಸರದಲ್ಲಿ ಬಳಕೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಬದ್ಧತೆ ಉಳ್ಳವರಾಗಬೇಕು ನವೆಂಬರ್ ಕನ್ನಡಿಗನಾಗಲು ಯಾರು ಮುಂದೆ ಬರಬೇಡಿ ವರ್ಷ ಪೂರ್ತಿ ತನ್ನ ಉಸಿರು ಇರುವವರೆಗೂ ಕನ್ನಡಿಗನಾಗಿ ಎನ್ನುವ ಸಂದೇಶ ಸಮಾಜಕ್ಕೆ ಸಾರುವಂತಾಗಲಿ ಎಂದರು
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಗೌರವಾಧ್ಯಕ್ಷ ಅಮಿರ್ ಉಪಾಧ್ಯಕ್ಷ ನರಸಿ ಪಾಟೀಲ್ ಅಶೋಕ ನಾಯಕ ಪ್ರಶಾಂತ ನಾಗೇಂದ್ರ ಅಘೋರ ಶಶಿಕಲಾ ಅಭಿ ಸತೀಶ್ ನಾಯಕ ಅನಿಲ್ ಯಾದವ್ ಅನಿಲ್ ಕುಮಾರ ಶ್ರೀನಿವಾಸ್ ನಾಯಕ ರಾಮ ಮೂರ್ತಿ ಲಚ್ಚಿ ರಂಗ ನಾಯಕ ಮಂಜುನಾಥ್ ನರಸಿಂಹ ಹಾಗೂ ಮತ್ತಿರರು ಹಾಜರಿದ್ದರು